Asianet Suvarna News Asianet Suvarna News

ರಾಯಚೂರು: ಪರೀಕ್ಷಾ ಭಯ ದೂರ ಮಾಡಲು SSLC ವಿದ್ಯಾರ್ಥಿಗಳಿಗೆ ಅಣುಕು ಪರೀಕ್ಷೆ

ರಾಯಚೂರಿನಲ್ಲಿ ನೂತನ ಎಸ್ಎಸ್ಎಲ್ಸಿ ಪರೀಕ್ಷಾ ಪದ್ಧತಿ ಬಗ್ಗೆ ಮಕ್ಕಳಿಗೆ ಮಾಕ್ ( ಮಾದರಿ ಪರೀಕ್ಷೆ) ಎಕ್ಸಾಂ ನಡೆಸುವ ಮುಖಾಂತರ ಭಯ ದೂರ ಮಾಡಲಾಗುತ್ತಿದೆ.

ಬೆಂಗಳೂರು (ಜು. 16): ಕೊರೊನಾ ಸೋಂಕಿನಿಂದಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬೇಕು ಅಥವಾ ಬೇಡ ಎಂಬ ವಿವಾದ ಮಧ್ಯೆಯೇ ಶಿಕ್ಷಣ ಇಲಾಖೆ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದೆ. ಇದೇ ಜುಲೈ 19 ಮತ್ತು 22 ರಂದು ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. 

ರಾಯಚೂರಿನಲ್ಲಿ ನೂತನ ಎಸ್ಎಸ್ಎಲ್‌ಸಿ ಪರೀಕ್ಷಾ ಪದ್ಧತಿ ಬಗ್ಗೆ ಮಕ್ಕಳಿಗೆ ಮಾಕ್ ( ಮಾದರಿ ಪರೀಕ್ಷೆ) ಎಕ್ಸಾಂ ನಡೆಸುವ ಮುಖಾಂತರ ಭಯ ದೂರ ಮಾಡಲಾಗುತ್ತಿದೆ. ಈಗಾಗಲ್ಲೇ ಮಕ್ಕಳಿಗೆ ಮನೆಗಳಿಗೆ ನೂತನ ಮಾದರಿಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನೀಡಿ ಪರೀಕ್ಷೆ ನಡೆಸಲಾಗಿದೆ.

Video Top Stories