Asianet Suvarna News Asianet Suvarna News

ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆ ಆರಂಭಕ್ಕೆ ಸಿದ್ಧತೆ

ಮೊರಾರ್ಜಿ, ಕಿತ್ತೂರು ಚೆನ್ನಮ್ಮ ವಸತಿ ಶಾಲೆಗಳ ಆರಂಭಕ್ಕೆ ಅಧಿಕಾರಿಗಳ ಸಲಹೆ| ವಸತಿ ಶಾಲೆ ಆರಂಭಿಸುವುದಕ್ಕೆ ಸಿದ್ಧ ಎಂದ ಸಮಾಜ ಕಲ್ಯಾಣ ಇಲಾಖೆ| ಎಸ್‌.ಸುರೇಶ್‌ ಕುಮಾರ್‌ ನೃತೃತ್ವದಲ್ಲಿ ಮೂರು ದಿನ ಸಭೆ| 

Nov 4, 2020, 3:14 PM IST

ಬೆಂಗಳೂರು(ನ.04): ಹಂತ ಹಂತವಾಗಿ ಶಾಲೆ ಆರಂಭಕ್ಕೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ನೃತೃತ್ವದಲ್ಲಿ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮೂರು ದಿನಗಳ ಸಭೆ ನಡೆಯಲಿದೆ.

ಕೊರೋನಾ ಬಳಿಕ ಶಾಲೆ ಆರಂಭ : ಸರ್ಕಾರಕ್ಕೆ ಕಾದಿದ್ದು ಬಿಗ್ ಶಾಕ್

ಮೊರಾರ್ಜಿ, ಕಿತ್ತೂರು ಚೆನ್ನಮ್ಮ ವಸತಿ ಶಾಲೆಗಳ ಆರಂಭಕ್ಕೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಅಧಿಕಾರಿಗಳು ಸಲಹೆ ಮೇರೆಗೆ ವಸತಿ ಶಾಲೆಗಳನ್ನ ಆರಂಭಿಸುವುದಕ್ಕೆ ಸಿದ್ಧವಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಎಂದು ತಿಳಿಸಿದೆ.