
ಈ ವಿದ್ಯಾರ್ಥಿಗೆ MBBS ಮಾಡುವ ಆಸೆ ; ವೈದ್ಯನಾಗುವ ಕನಸಿಗೆ ಬೇಕಾಗಿದೆ ನೆರವಿನ ಹಸ್ತ
ಕೊಪ್ಪಳ ತಾ. ಬೇಳೂರ್ ಗ್ರಾಮದ ಸಂಜೀವ್ ಕುಮಾರ್ ಎನ್ನುವ ವಿದ್ಯಾರ್ಥಿ ಎಂಬಿಬಿಎಸ್ ಮಾಡುವ ಕನಸು ಹೊತ್ತಿದ್ದಾನೆ. ಸೀಟು ಕೂಡಾ ಸಿಕ್ಕಿದೆ. ಆದರೆ ಫೀಸ್ ಕಟ್ಟಲು ಪರದಾಡುತ್ತಿದ್ದಾನೆ. ಇಂದು 5 ಗಂಟೆಯೊಳಗೆ 50 ಸಾವಿರ ರೂ ಕಟ್ಟಿದರೆ ಸೀಟು ಖಚಿತವಾಗುತ್ತದೆ.
ಬೆಂಗಳೂರು (ನ. 27): ಓದು, ಉತ್ತಮ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿರುತ್ತದೆ. ಕೆಲವರಿಗೆ ಅದು ಸುಲಭವಾಗಿ ಸಿಕ್ಕಿದರೆ, ಇನ್ನು ಕೆಲವರಿಗೆ ಹಣಕಾಸಿನ ಸಮಸ್ಯೆ, ಮನೆಯಲ್ಲಿ ಅನಾನುಕೂಲ ಹೀಗೆ ಏನಾದರೊಂದು ಸಮಸ್ಯೆ ಇರುತ್ತದೆ. ಹೀಗಾದಾಗ ವಿದ್ಯಾರ್ಥಿ ಕನಸು, ಕನಸಾಗಿಯೇ ಉಳಿದು ಬಿಡುತ್ತದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಂಪುಟ ಸರ್ಕಸ್‌ಗೆ ಟ್ವಿಸ್ಟ್ ; ಬಿಎಸ್‌ವೈಗೆ ಹೈಕಮಾಂಡ್‌ನಿಂದ ಬಂತು ಸ್ಪಷ್ಟ ಸಂದೇಶ
ಕೊಪ್ಪಳ ತಾ. ಬೇಳೂರ್ ಗ್ರಾಮದ ಸಂಜೀವ್ ಕುಮಾರ್ ಎನ್ನುವ ವಿದ್ಯಾರ್ಥಿ ಎಂಬಿಬಿಎಸ್ ಮಾಡುವ ಕನಸು ಹೊತ್ತಿದ್ದಾನೆ. ಸೀಟು ಕೂಡಾ ಸಿಕ್ಕಿದೆ. ಆದರೆ ಫೀಸ್ ಕಟ್ಟಲು ಪರದಾಡುತ್ತಿದ್ದಾನೆ. ಇಂದು 5 ಗಂಟೆಯೊಳಗೆ 50 ಸಾವಿರ ರೂ ಕಟ್ಟಿದರೆ ಸೀಟು ಖಚಿತವಾಗುತ್ತದೆ. ಮನೆಯಲ್ಲಿ ಬಡತನ. ಹಾಗೋ ಹೀಗೋ ಮಾಡಿ ಹಣ ಹೊಂದಿಸಿದ್ದಾರೆ. ಈಗ 50 ಸಾವಿರ ರೂ ನೆರವಿನ ಹಸ್ತ ಚಾಚುತ್ತಿದ್ದಾನೆ. ವಿದ್ಯಾರ್ಥಿಯ ಭವಿಷ್ಯ ಈ ಹಣದ ಮೇಲೆ ನಿಂತಿದೆ. ಬನ್ನಿ ನೆರವಾಗೋಣ.