ಆನ್ ಲೈನ್ ಕಲಿಕೆ ಬಹು ಸುಲಭ, ಕಿಚ್ಚ ಚಾರಿಟೇಬಲ್‌ನಿಂದ ಡಾರ್ಕ್ ಬೋರ್ಡ್!
* ಅಕ್ಷರ ಕ್ರಾಂತಿಯಲ್ಲಿ ಮತ್ತೊಂದು ಹೆಜ್ಜೆ ಇಟ್ಟ ಅಭಿನಯ ಚಕ್ರವರ್ತಿ.!
* ವಿದ್ಯಾರ್ಥಿಗಳಿಗೆ ಕಿಚ್ಚ ಸುದೀಪ್ ರಿಂದ ಸಿಗ್ತಿದೆ ವಿಶೇಷ ಉಡುಗೊರೆ
* ಆನ್ ಲೈನ್ ಕ್ಲಾಸ್ ಕಿರಿಕಿರಿಗೆ ಕಿಚ್ಚ ಸುದೀಪ್ ಬಳಿ ಇದೆ ಮಹಾಉಪಾಯ
* ಆನ್ ಲೈನ್ ಕಲಿಕೆ ಮತ್ತಷ್ಟು ಸುಲಭ
ಬೆಂಗಳೂರು(ಆ. 16) ಕಿಚ್ಚ ಸುದೀಪ್ ಮಾಡಿರೋ ಪ್ಲಾನ್ ನಿಂದ ಆನ್ ಲೈನ್ ಕ್ಲಾಸ್ ನಲ್ಲಿ ಪಾಠ ಕಲಿಯೋದು ಬಲು ಸುಲಭ ಮತ್ತು ಸುಂದರ. ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಸುಲಭ ವಿಧಾನದಲ್ಲಿ ನಲಿಕಲಿಯಬಹುದು. ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಆನ್ ಲೈನ್ ಕಲಿಕೆಗೆ ಸ್ಪೆಷಲ್ ಆ್ಯಪ್ ಬಿಡುಗಡೆ ಮಾಡಿದೆ.
ಈಗ ಆನ್ ಲೈನ್ ಕ್ಲಾಸ್ ನಲ್ಲಿ ಪಾಠ ಅರ್ಥ ಆಗದೇ ಕಷ್ಟ ಪಡುತ್ತಿದ್ದಾರೆ ವಿಧ್ಯಾರ್ಥಿಗಳು ಎಂಬುದನ್ನು ಮನಗಂಡು ಆಪ್ ಸಿದ್ಧ ಮಾಡಲಾಗಿದೆ. ಪಠ್ಯ ಅರ್ಥ ಆಗೋ ಹಾಗೆ ಪಾಠ ಇಲ್ಲಿ ಸಾಧ್ಯವಿದೆ. ಈ ಆಪ್ ಅನ್ನ ಎಲ್ಲಾ ಸರ್ಕಾರಿ ಶಾಲೆ, ಖಾಸಗಿ ಶಾಲೆಯವರು ಬಳಸಿಕೊಳ್ಳಬಹುದು.. ರಾಜ್ಯ ಸರ್ಕಾರಕ್ಕೂ ಈ ಆಪ್ ಬಗ್ಗೆ ಮನವರಿಗೆ ಮಾಡಿಕೊಡಲಾಗುತ್ತದೆ. ಶಿಕ್ಷಣ ಸಚಿವರನ್ನ ಭೇಟಿ ಮಾಡಿ ಈ ಡಾರ್ಕ್ ಬೋರ್ಡ್ ಅಪ್ಲಿಕೇಶನ್ ಕ್ಲಾಸ್ ಬಗ್ಗೆ ತಿಳಿಸಿ ಆನ್ ಲೈನ್ ಕ್ಲಾಸ್ ಆಫ್ ಲೈನ್ ಕ್ಲಾಸ್ ಗಳಿಗೆ ಬಳಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ.
ಶಾಲೆ ಪುನಾರಂಭ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಮೊದಲು ಸುದೀಪ್ ದತ್ತು ಪಡೆದ ಶಾಲೆಗಳಲ್ಲಿ ಈ ಡಾರ್ಕ್ ಬೋರ್ಡ್ ಆಪ್ ಬಳಕೆ ಮಾಡಲಾಗುತ್ತದೆ. ಆ ನಂತರ ಎಲ್ಲಾ ಶಾಲಾ ಶಿಕ್ಷಕರಿಗೂ ಈ ಡಾರ್ಕ್ ಬೋರ್ಡ್ ಶಿಕ್ಷಣವನ್ನ ಬಳಸಿಕೊಳ್ಳಲು ಉತ್ತೇಜಿಸುವ ಕೆಲಸ ಮಾಡುತ್ತೇವೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ನ ಸೊಸೈಟಿ ಅಧ್ಯಕ್ಷ ರಮೇಶ್ ಕಿಟ್ಟಿ ತಿಳಿಸಿದ್ದಾರೆ.