Asianet Suvarna News Asianet Suvarna News
breaking news image

ಕೊರೋನಾ ಇದ್ರೂ ರಾಜ್ಯದಲ್ಲಿ SSLC, PUC ಪರೀಕ್ಷೆ ನಡೆಯೋದು ಪಕ್ಕಾ!

ಕೊರೋನಾ ಅಟ್ಟಹಾಸ ಇನ್ನೂ ನಿಂತಿಲ್ಲ, ಶಾಲೆಗಳು ಯಾವಾಗ ಆರಂಭವಾಗುತ್ತವೆ ಎಂದು ಹೇಳಲು ಸಾದ್ಯವಿಲ್ಲ. ಬಹುತೇಕ ತರಗತಿ ಆನ್‌ಲೈನ್ ಮೂಲಕವೇ ನಡೆದಿದೆ. ಹೀಗಿರುವಾಗಲೇ ಈ ಬಾರಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯನ್ನೆದುರಿಸಬೇಕಾದ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿ ಬಂದೆರಗಿದೆ.

ಬೆಂಗಲೂರು(ನ.23): ಕೊರೋನಾ ಅಟ್ಟಹಾಸ ಇನ್ನೂ ನಿಂತಿಲ್ಲ, ಶಾಲೆಗಳು ಯಾವಾಗ ಆರಂಭವಾಗುತ್ತವೆ ಎಂದು ಹೇಳಲು ಸಾದ್ಯವಿಲ್ಲ. ಬಹುತೇಕ ತರಗತಿ ಆನ್‌ಲೈನ್ ಮೂಲಕವೇ ನಡೆದಿದೆ. ಹೀಗಿರುವಾಗಲೇ ಈ ಬಾರಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯನ್ನೆದುರಿಸಬೇಕಾದ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿ ಬಂದೆರಗಿದೆ.

ಇಲ್ಲಿಯವರೆಗೆ ಶಾಲೆ ತೆರೆಯುವುದಿಲ್ಲ: ಸಿಎಂ ಸಭೆಯಲ್ಲಿ ಹೊರಬಿತ್ತು ಸ್ಪಷ್ಟ ನಿರ್ಧಾರ

ಹೌದು ಕೊರೋನಾದಿಂದಾಗಿ ಪರೀಕ್ಷೆಗಳು ಮುಂದೂಡಬಹುದು ಅಥವಾ, ಕ್ಯಾನ್ಸಲ್ ಆಗಬಹುದೆಂದು ನೀವಂದುಕೊಂಡಿದ್ದರೆ ಅಂತಹ ಯೋಚನೆಯನ್ನು ಕೈಬಿಟ್ಟು ಪರೀಕ್ಷೆಗೆ ಸಿದ್ಧರಾಗಿ. ಯಾಕಂದ್ರೆ ಈ ಎರಡೂ ಪರೀಕ್ಷೆಗಳು ನಡೆಯಲಿದ್ದು ಇವೆರಡರ ವೇಳಾಪಟ್ಟಿ ಸದ್ಯದಲ್ಲೇ ಬಿಡುಗಡೆಗೊಳಿಸುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಾಲಾ- ಕಾಲೇಜು ಪುನಾರಂಭದ ಬಗ್ಗೆ ಸರ್ಕಾರಕ್ಕೆ ಎಚ್‌ಡಿಕೆ ಸಲಹೆ

ಈ ಬಾರಿ ಒಟ್ಟು 9,59,566 ಮಂದಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದು, ಅತ್ತ 5,70,126 ಮಂದಿ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯನ್ನೆದುರಿಸಲಿದ್ದಾರೆ. 

Video Top Stories