ಪಠ್ಯಕ್ರಮದಲ್ಲಿ ಟಿಪ್ಪುವಿನ ವೈಭವೀಕರಣಕ್ಕೆ ಕೊಕ್...ಹೊಸ ಇತಿಹಾಸ ಸೇರ್ಪಡೆ
ಟಿಪ್ಪು ಸುಲ್ತಾನ್ (Tippu Sultan) ಕುರಿತು ಶಾಲಾ ಪಠ್ಯದಲ್ಲಿ ಇರುವ ಸತ್ಯವಲ್ಲದ ಹಾಗೂ ಅನಗತ್ಯವಾದ ಕೆಲ ವಿಚಾರಗಳನ್ನು ಕೈಬಿಡುವ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರು (ಮಾ. 30): ಟಿಪ್ಪು ಸುಲ್ತಾನ್ (Tippu Sultan) ಕುರಿತು ಶಾಲಾ ಪಠ್ಯದಲ್ಲಿ ಇರುವ ಸತ್ಯವಲ್ಲದ ಹಾಗೂ ಅನಗತ್ಯವಾದ ಕೆಲ ವಿಚಾರಗಳನ್ನು ಕೈಬಿಡುವ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಟಿಪ್ಪು ಯುದ್ಧಕ್ಕೆ ಎಂಟ್ರಿ ಕೊಟ್ಟ ಕನಕಪುರ ಬಂಡೆ ಡಿಕೆಶಿ
ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಅವರನ್ನು ವೈಭವೀಕರಿಸಲಾಗಿದೆ. ಅದನ್ನು ತೆಗೆದು ಹಾಕಿ, ಟಿಪ್ಪು ಕುರಿತಾದ ವಾಸ್ತವಗಳನ್ನು ತಿಳಿಸಬೇಕು ಎಂಬ ಚರ್ಚೆ ಶುರುವಾಗಿದೆ. ಪಠ್ಯ ಪುಸ್ತಕ ಪರಿಶೀಲನೆ ಸಮಿತಿ ಈ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಶೀಘ್ರದಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಧ್ಯೆ, ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ಗಿರುವ ‘ಮೈಸೂರು ಹುಲಿ’ ಎಂಬ ಬಿರುದನ್ನು ಕೈಬಿಡಬೇಕು ಎಂಬುದು ಸೇರಿದಂತೆ ಟಿಪ್ಪುವನ್ನು ವೈಭವೀಕರಿಸಿರುವ ಕೆಲ ಅಂಶಗಳನ್ನು ತೆಗೆದುಹಾಕಲು ಪಠ್ಯ ಪರಿಷ್ಕರಣೆ ಸಮಿತಿ ಸರ್ಕಾರಕ್ಕೆ ತನ್ನ ವರದಿಯಲ್ಲಿ ಈಗಾಗಲೇ ಶಿಫಾರಸು ಮಾಡಿದೆ