ಹಾಡಿ ನಲಿದು ಕಲಿಸುವ ವಂದನಾ ಟೀಚರ್ ಈಗ ಎಲ್ಲೆಲ್ಲೂ ಫೇಮಸ್

ಇವರು ವಂದನಾ ರೈ.  ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನವರು. ಈ ಮೇಡಂ ಅಪ್ಪಟ ಹಳ್ಳಿ ಪ್ರತಿಭೆ. ಇವರು ಕುಣಿದು ಕುಪ್ಪಳಿಸಿ, ನಗು ನಗುತ್ತಾ ಮಾಡುವ ಅಭಿನಯ ಗೀತೆಯ ವಿಡಿಯೋ ಪಾಠಗಳು ರಾಜ್ಯ, ದೇಶ, ಹೊರದೇಶಗಳಲ್ಲೂ ಜನಪ್ರಿಯ.

Share this Video
  • FB
  • Linkdin
  • Whatsapp

ಮಂಗಳೂರು (ಜೂ. 23): ಇವರು ವಂದನಾ ರೈ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನವರು. ಈ ಮೇಡಂ ಅಪ್ಪಟ ಹಳ್ಳಿ ಪ್ರತಿಭೆ. ಇವರು ಕುಣಿದು ಕುಪ್ಪಳಿಸಿ, ನಗು ನಗುತ್ತಾ ಮಾಡುವ ಅಭಿನಯ ಗೀತೆಯ ವಿಡಿಯೋ ಪಾಠಗಳು ರಾಜ್ಯ, ದೇಶ, ಹೊರದೇಶಗಳಲ್ಲೂ ಜನಪ್ರಿಯ.

ಲಾಕ್‌ಡೌನ್ ತಡೆ ನಡುವೆ ಪುಟಾಣಿಗಳ ಮನ ಗೆದ್ದ ಹಳ್ಳಿಯ ಕನ್ನಡ ಟೀಚರ್!

ಇವರ ವಿಡಿಯೋ ಪಾಠಗಳು ಫೇಸ್ಬುಕ್ಕಿನಲ್ಲಿ ಪೋಸ್ಟ್ ಆದ ಗಂಟೆಗಳಲ್ಲಿ ಸಾವಿರಾರು ಶೇರ್ ಗಳನ್ನು ಕಾಣುತ್ತವೆ, ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ನಮಗೂ ಪಾಠ ಮಾಡಿ ಮೇಡಂ ಎಂಬ ಬೇಡಿಕೆ ಎಲ್ಲೆಡೆಯಿಂದ ಇವರಿಗೆ ಬರುತ್ತದೆ. ಇವರೀಗ ಮಕ್ಕಳು ಹಾಗೂ ಹೆತ್ತವರ ಪಾಲಿನ ನೆಚ್ಚಿನ ಮೇಡಂ ಅಂತೂ ಹೌದು. ಇವರ ಬಗ್ಗೆ ಒಂದು ಕಿರುಪರಿಚಯ ಇಲ್ಲಿದೆ.

Related Video