16 ‘ಕಿರಿಯ ಸಂಪಾದಕ’ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಧ್ಯಮ ಸಂಸ್ಥೆಗಳು ಕೆಎಂಎಫ್‌ ‘ನಂದಿನಿ’ ಹಾಗೂ ರೇವಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನೀಡುವ ‘ಕಿರಿಯ ಸಂಪಾದಕ’ ತೃತೀಯ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ  ನಡೆಯಿತು. 

First Published Mar 28, 2021, 5:53 PM IST | Last Updated Mar 28, 2021, 5:53 PM IST

ಬೆಂಗಳೂರು (ಮಾ. 28): ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಧ್ಯಮ ಸಂಸ್ಥೆಗಳು ಕೆಎಂಎಫ್‌ ‘ನಂದಿನಿ’ ಹಾಗೂ ರೇವಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನೀಡುವ ‘ಕಿರಿಯ ಸಂಪಾದಕ’ ತೃತೀಯ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ  ನಡೆಯಿತು. ಶಾಲಾ ವಿದ್ಯಾರ್ಥಿಗಳು ರಚಿಸಿದ ದಿನಪತ್ರಿಕೆಗಳ ಪೈಕಿ ಅತ್ಯುತ್ತಮ ಎನಿಸಿದವುಗಳನ್ನು ಆರಿಸಿ, ಅವುಗಳನ್ನು ಸಿದ್ಧಪಡಿಸಿದ ವಿದ್ಯಾರ್ಥಿಗಳನ್ನು ‘ಕಿರಿಯ ಸಂಪಾದಕ’ ಪ್ರಶಸ್ತಿ ನೀಡಿ ಪುರಸ್ಕರಿಸುವ ಕನ್ನಡ ಪತ್ರಿಕೋದ್ಯಮದಲ್ಲೇ ವಿನೂತನ ಪ್ರಯತ್ನವಿದು.

ರಾಜ್ಯ ರಾಜಧಾನಿಯ ಯಲಹಂಕ ಸಮೀಪ ಇರುವ ರೇವಾ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ 3 ಹಾಗೂ ಜಿಲ್ಲಾ ಮಟ್ಟದ 16 ಪ್ರಶಸ್ತಿಗಳನ್ನು ಘೋಷಿಸಿ ಪ್ರದಾನ ಮಾಡಲಾಯಿತು. ಸಮಾರಂಭದ ಝಲಕ್ ಇಲ್ಲಿದೆ ನೋಡಿ..!