ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ

ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕದ ಸಹಯೋಗ ಮುಂದುವರಿದಿದ್ದು, ವುಮೆನ್‌ ಫಾರ್‌ ಸ್ಟೆಮ್‌ ಫೆಲೋಷಿಪ್‌ ಯೋಜನೆ ಜಾರಿ ಮಾಡಲಾಗಿದೆ.
 

First Published Nov 18, 2024, 11:03 PM IST | Last Updated Nov 18, 2024, 11:03 PM IST

ಬೆಂಗಳೂರು (ನ.18): ಅಮೆರಿಕದ ಮತ್ತು ಭಾರತವು ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲದ ಸಹಭಾಗಿತ್ವವನ್ನು ಹೊಂದಿದೆ. ಇದೀಗ ವುಮೆನ್‌ ಫಾರ್‌ ಸ್ಟೆಮ್‌ ಫೆಲೋಶಿಪ್‌ ಯೋಜನೆಯ ಆರಂಭದೊಂದಿಗೆ ಇದು ಇನ್ನಷ್ಟು ವಿಸ್ತಾರವಾಗಲಿದೆ. ಮಹಿಳೆಯ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಕಾರ್ಯಕ್ರಮಕ್ಕೆ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಚಾಲನೆ ನೀಡಿದ್ದಾರೆ. ಸಾರ್ವತ್ರಿಕ ಸಾಕ್ಷರತೆ ಸಮಾನ ಶಿಕ್ಷಣ ಯೋಜನೆಯ ಧ್ಯೇಯವಾಗಿದೆ. ವೃತ್ತಿಯಲ್ಲಿ ಪ್ರಾರಂಭಿಕ ಹಂತದಲ್ಲಿರೋ ಮಹಿಳೆಯರಿಗೆ ಸಹಕಾರವಾಗಲಿದೆ.