ಗುಲ್ಬರ್ಗಾ ವಿವಿಯಲ್ಲಿ ದುಡ್ಡು ಕೊಟ್ರೆ ಸಾಕು ಫೇಲಾಗಿದ್ರೂ ಪಾಸಾಗಿರುವ ಮಾರ್ಕ್ಸ್ ಕಾರ್ಡ್ ಸಿಗುತ್ತೆ!
ಗುಲ್ಬರ್ಗಾ ವಿವಿಯಲ್ಲಿ ದುಡ್ಡು ಕೊಟ್ರೆ ಸಾಕು, ಫೇಲಾಗಿದ್ರೂ ಪಾಸಾಗಿರುವ ಮಾರ್ಕ್ಸ್ ಕಾರ್ಡ್ ಕೊಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಿದ್ಯಾರ್ಥಿಯೊಬ್ಬರು ದೂರು ನೀಡಿದ್ದು, ಬೆಳಕಿಗೆ ಬಂದಿದೆ.
ಕಲಬುರಗಿ (ಜು. 04): ಗುಲ್ಬರ್ಗಾ ವಿವಿಯಲ್ಲಿ (Gulbarga University) ದುಡ್ಡು ಕೊಟ್ರೆ ಸಾಕು, ಫೇಲಾಗಿದ್ರೂ ಪಾಸಾಗಿರುವ ಮಾರ್ಕ್ಸ್ ಕಾರ್ಡ್ (Marks Card) ಕೊಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಿದ್ಯಾರ್ಥಿಯೊಬ್ಬರು ದೂರು ನೀಡಿದ್ದು, ಬೆಳಕಿಗೆ ಬಂದಿದೆ.
ಬಗೆಹರಿಯದ ರಾಯಚೂರು ಕಲುಷಿತ ನೀರು ಸಮಸ್ಯೆ, ಮಹಿಳೆ ಸಾವು, 40 ಜನರು ಅಸ್ವಸ್ಥ
ನಾಗರಾಜ್ ಎನ್ನುವ ವಿದ್ಯಾರ್ಥಿ ಒಂದು ವಿಷಯದಲ್ಲಿ ಫೇಲ್ ಆಗಿರುತ್ತಾನೆ. ಪಾಸ್ ಮಾಡಲು ಎಫ್‌ಡಿಸಿ 20 ಸಾವಿರ ರೂ ಹಣ ಕೇಳುತ್ತಾರೆ. ಹಣ ಕೊಟ್ಟು ಮಾರ್ಕ್ಸ್ ಕಾರ್ಡ್ ಪಡೆಯುತ್ತಾನೆ. ನಂತರ ಎಂಎಸ್‌ಡಬ್ಲ್ಯೂ ಗೆ ಸೇರಿದಾಗ ಅಸಲಿ ಮಾರ್ಕ್‌ಕಾರ್ಡ್ ಕೇಳುತ್ತಾರೆ. ಅದನ್ನು ತರಲು ಯೂನಿವರ್ಸಿಟಿಗೆ ಬಂದಾಗ ಇಲ್ಲಾಗಿರುವ ಅವ್ಯವಹಾರ ಬೆಳಕಿಗೆ ಬಂದಿದೆ.