ಅ. 15 ರ ನಂತರ ಶಾಲಾ-ಕಾಲೇಜು ತೆರೆಯಲು ಸಮ್ಮತಿ; ಈ ಮಾರ್ಗಸೂಚಿಗಳು ಕಡ್ಡಾಯ

ಅನ್‌ಲಾಕ್‌ 5.0 ರಲ್ಲಿ ಶಾಲಾ ಕಾಲೇಜು ತೆರೆಯಲು ಅನುಮತಿ ನೀಡಿದೆ. ಆದರೆ ಇದರ ಸಂಪೂರ್ಣ ಸ್ವಾತಂತ್ರವನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟಿದೆ. ಶಾಲೆ ಆರಂಭಕ್ಕೂ ಮುನ್ನ ಸುರಕ್ಷತಾ ದೃಷ್ಟಿಯಿಂದ ಮಾರ್ಗಸೂಚಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದೆ. 

First Published Oct 6, 2020, 1:01 PM IST | Last Updated Oct 6, 2020, 1:09 PM IST

ಬೆಂಗಳೂರು (ಅ. 06): ಅನ್‌ಲಾಕ್‌ 5.0 ರಲ್ಲಿ ಶಾಲಾ ಕಾಲೇಜು ತೆರೆಯಲು ಅನುಮತಿ ನೀಡಿದೆ. ಆದರೆ ಇದರ ಸಂಪೂರ್ಣ ಸ್ವಾತಂತ್ರವನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟಿದೆ. ಶಾಲೆ ಆರಂಭಕ್ಕೂ ಮುನ್ನ ಸುರಕ್ಷತಾ ದೃಷ್ಟಿಯಿಂದ ಮಾರ್ಗಸೂಚಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದೆ.

ಅಕ್ಟೋಬರ್‌ನಲ್ಲಿ ಶಾಲೆ ಆರಂಭವಾದ್ರೆ ಹೇಗೆ? ಬೇಡ ಎಂದ ಶೇ. 71 ರಷ್ಟು ಪೋಷಕರು! 

ಶಾಲೆ ತೆರೆದರೆ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ. ಪೋಷಕರು, ಮಕ್ಕಳು ಬಯಸಿದರೆ ಆನ್‌ಲೈನ್ ತರಗತಿಗೆ ಅವಕಾಶ ನೀಡಬೇಕು. ಶಾಲೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡಬೇಕು. ಸೋಂಕು ನಿವಾರಕ ಬಳಸಿ ಸ್ವಚ್ಚತೆ ಕಡ್ಡಾಯಗೊಳಿಸಿದೆ.