ಅಕ್ಟೋಬರ್‌ನಲ್ಲಿ ಶಾಲೆ ಆರಂಭವಾದ್ರೆ ಹೇಗೆ? ಬೇಡ ಎಂದ ಶೇ. 71ರಷ್ಟು ಪೋಷಕರು!
ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸಲು ಧೈರ್ಯ ತೋರುವ ಹೆತ್ತವರ ಸಂಖ್ಯೆ ಶೇ. 23 ರಿಂದ ಶೇ 20ಕ್ಕಿಳಿದಿದೆ| 2020ನೇ ವರ್ಷದಲ್ಲಿ ಕೇವಲ ಶೇ 28ರಷ್ಟು ಪೋಷಕರಷ್ಟೇ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿದ್ದಾರೆ| ಉತ್ತರ ಭಾರತದ ಅನೇಕ ಮಂದಿ ಪೋಷಕರು ಕೊರೋನಾ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಇದು ಅಕ್ಟೋಬರ್ ಹಾಗೂ ನವೆಂಬರ್‌ನಲ್ಲೂ ಮುಂದುವರೆಯಲಿದೆ| ಚಳಿಗಾಲದಲ್ಲಿ ಮಕ್ಕಳ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂಬ ಭಯ ತೋಡಿಕೊಂಡಿದ್ದಾರೆ.
ನವದೆಹಲಿ(ಸೆ.30): ಮಹಾಮಾರಿ ಕೊರೋನಾ ಇಡೀ ವಿಶ್ವವನ್ನೇ ಕಂಗೆಡಿಸಿದೆ. ಭಾರತಕ್ಕೂ ಎಂಟ್ರಿ ಕೊಟ್ಟಿರುವ ಈ ವೈರಸ್ ತಗ್ಗುವ ಲಕ್ಷಣಗಳೇ ಕಾಣುತ್ತಿಲ್ಲ. 60 ಲಕ್ಷಕ್ಕೂ ಅಧಿಕ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದು, ಪ್ರತಿದಿನ 20 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿದೆ. ಕಳೆದೆರಡು ವಾರದಿಂದ ದಿನ ನಿತ್ಯ ದಾಖಲಾಗುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರೂ, ಖುಷಿ ಪಡುವಂತಿಲ್ಲ. ಯಾಕೆಂದರೆ ನಿತ್ಯವೂ ನಡೆಸುತ್ತಿದ್ದ ಟೆಸ್ಟ್‌ನ್ನು 11 ಲಕ್ಷದಿಂದ 7 ಲಕ್ಷಕ್ಕಿಳಿಸಲಾಗಿದೆ. ಅತ್ತ ಮೃತರ ಸಂಖ್ಯೆಯೂ ಒಂದು ಲಕ್ಷ ದಾಟಿದ್ದು, ಜನ ಸಾಮಾನ್ಯರನ್ನು ಹೊರ ಹೋಗಬೇಕಾ ಅಥವಾ ಮನೆಯಲ್ಲೇ ಉಳಿಯಬೇಕಾ? ಎಂಬ ಗೊಂದಲಕ್ಕೆ ದೂಡಿದೆ.
ಇನ್ನು ಲಾಖ್‌ಡೌನ್ ಬಳಿಕ ಅಂದರೆ 2020ರ ಮಾರ್ಚ್‌ನಿಂದ ಮುಚ್ಚಲಾಗಿರುವ ಶಾಲೆಗಳು ಇನ್ನೂ ತೆರೆದಿಲ್ಲ. ಇನ್ನು ಭಾರತದಲ್ಲಿ ಮಹಾಂಆರಿ ಎಂಟ್ರಿ ಕೊಟ್ಟು ಎಂಟು ತಿಂಗಳಾಗುತ್ತಿದ್ದು, ಈ ವೇಳೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಪೋಷಕರ ಅಭಿಪ್ರಾಯವೇನು ಎಂದು ತಿಳಿದುಕೊಳ್ಳಲು ಲೋಕಲ್ ಸರ್ಕಲ್ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಸಿಕ್ಕ ಫಲಿತಾಂಶ ಗಮನಿಸಿದರೆ ಸರ್ಕಾರ ಶಾಲೆ ಆರಂಭಿಸಲು ಸೂಚನೆ ಕೊಟ್ಟರೂ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ.
217 ಜಿಲ್ಲೆಗಳಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ 14,500 ಮಂದಿ ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಇವರೆಲ್ಲರ ಬಳಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅಕ್ಟೋಬರ್‌ನಿಂದ ಶಾಲೆ ಪುನಾರಂಭಿಸಲು ನಿರ್ಧರಿಸಿದರೆ, ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿದ್ದೀರಾ? ಎಂದು ಪ್ರಶ್ನಿಸಲಾಗಿತ್ತು. ಈ ವೇಳೆ ಶೇ. 71 ರಷ್ಟು ಪೋಷಕರು ಇಲ್ಲ ಎಂದು ಹೇಳಿದ್ದರೆ, ಕೇವಲ ಶೇ. 20 ರಷ್ಟು ಪೋಷಕರಷ್ಟೇ ತಯಾರಿದ್ದೇವೆಂದಿದ್ದಾರೆ. ಇನ್ನುಳಿದ ಶೇ 9 ಮಂದಿ ಈ ಬಗ್ಗೆ ಸರಿಯಾದ ನಿರ್ಧಾರ ತಿಳಿಸಿಲ್ಲ.
ಲೋಕಲ್ ಸರ್ವೆ ಇಂತಹುದೇ ಒಂದು ಸಮೀಕ್ಷೆಯನ್ನು ಆಗಸ್ಟ್‌ನಲ್ಲಿ ನಡೆಸಿತ್ತು. ಈ ವೇಳೆ ಸುಮಾರು ಶೇ 23ರಷ್ಟು ಪೋಷಕರು ತಮ್ಮ ಮಕ್ಕಳನ್ನು ಕೊರೋನಾತಂಕ ನಡುವೆಯೂ ಶಾಲೆಗೆ ಕಳುಹಿಸಲು ಸಿದ್ಧವಾಗಿದ್ದೇವೆ ಎಂದಿದ್ದರು. ಆದರೆ ಇದಾದ ಬಳಿಕ ನಡೆದ ಸಮೀಕ್ಷೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದಂತೆಯೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿದ್ದೇವೆ ಎನ್ನುತ್ತಿರುವ ಪೋಷಕರ ಸಂಖ್ಯೆ ಶೇ. 23 ರಿಂದ ಶೇ.20ಕ್ಕೆ ಇಳಿದಿದೆ. ಒಂದೇ ತಿಂಗಳಲ್ಲಿ ಶೇ. 3ರಷ್ಟು ಕುಸಿತ ಕಂಡಿದೆ.
ಇನ್ನು ಇವರಿಗೆ ಕೇಳಲಾದ ಎರಡನೇ ಪ್ರಶ್ನೆಯಲ್ಲಿ ಸದ್ಯದ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮುಂಬರುವ ಹಬ್ಬಗಳನ್ನು ಗಮನಿಸಿ ಶಾಲೆ ಯಾವಾಗ ಪುನಾತ್ತಮ ಎಂದು ಪುರಂಭಗೊಂಡರೆ ಉತ್ತಮ ಎಂದು ಕೇಳಲಾಗಿತ್ತು. ಇದರಲ್ಲಿ ಶೇ. 32ರಷ್ಟು ಪೋಷಕರು ಡಿಸೆಂಬರ್ 31, 2020ರವರೆಗೆ ಆರಂಭವಾಗುವುದು ಬೇಡ ಎಂದಿದ್ದಾರೆ. ಇನ್ನು ಶೇ. 34ರಷ್ಟು ಪೋಷಕರು ಸರ್ಕಾರ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭಿಸುವುದ ಬೇಡ ಎಂದಿದ್ದಾರೆ, ಅಂದರೆ ಮಾರ್ಚ್/ ಏಪ್ರಿಲ್ 2021ರವರೆಗೆ. ಇನ್ನು ಶೇ. 7 ರಷ್ಟು ಪೋಷಕರು ಶಾಲೆಗಳು ಅಕ್ಟೋಬರ್ 1, 2020ರಿಂದಲೇ ಆರಂಭವಾಗಬೇಕು ಎಂದಿದ್ದಾರೆ. ಇನ್ನುಳಿದ ಶೇ. 12 ರಷ್ಟು ಮಂದಿ 2020ರ ಡಿಸೆಂಬರ್ 1ರಿಂದ ಆರಂಭವಾಗಲಿ ಎಂದಿದ್ದಾರೆ.
ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಅನೇಕ ಹಬ್ಬಗಳಿರತ್ತವೆ. ಸಾಮಾಣ್ಯವಾಗಿ ಈ ವೇಳೆ ಶಾಲೆಗಳು ಮುಚ್ಚಿರುತ್ತವೆ. ಇದಾಧ ಬಳಿಕದ ಕಾಲ ಅದರಲ್ಲು ಉತ್ತರ ಭಾರತದ ವಾತಾವರಣ ಪೋಷಕರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.
ಇನ್ನು ಲೋಕಲ್ ಸರ್ಕಲ್ ಈ ಸಮೀಕ್ಷೆ ವರದಿಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಿದೆ. ಪೋಷಕರ ಅಭಿಪ್ರಾಯ ಸರ್ಕಾರಗಳಿಗೆ ಶಾಲೆ ವಾಗಿನಿಂದ ಪುನಾರಂಭಿಸಬಹುದೆಂಬ ನಿರ್ಧಾರ ಕೈಗೊಳ್ಳಲು ಮತ್ತಷ್ಟು ಸಹಾಯ ಮಾಡಲಿದೆ.