Bhagavad Gita: ಧರ್ಮ, ಶಿಕ್ಷಣವನ್ನು ಮಿಕ್ಸ್ ಮಾಡಬಾರದು, ಸರ್ಕಾರ ವಿಮರ್ಶಿಸಲಿ: ತನ್ವೀರ್ ಸೇಠ್

ಗುಜರಾತ್‌ನಲ್ಲಿ 6ರಿಂದ 12ನೇ ತರಗತಿಯ ಪಠ್ಯದಲ್ಲಿ ಭಗವದ್ಗೀತೆ ಸೇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ನಮ್ಮ ರಾಜ್ಯದಲ್ಲೂ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೊಳಿಸುವ ಕುರಿತು ಚರ್ಚೆ ಆರಂಭವಾಗಿದೆ. 

First Published Mar 19, 2022, 6:21 PM IST | Last Updated Mar 19, 2022, 6:28 PM IST

ಬೆಂಗಳೂರು (ಮಾ. 19): ಗುಜರಾತ್‌ನಲ್ಲಿ 6ರಿಂದ 12ನೇ ತರಗತಿಯ ಪಠ್ಯದಲ್ಲಿ ಭಗವದ್ಗೀತೆ ಸೇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ನಮ್ಮ ರಾಜ್ಯದಲ್ಲೂ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೊಳಿಸುವ ಕುರಿತು ಚರ್ಚೆ ಆರಂಭವಾಗಿದೆ. 

Bhagavad Gita: ಭಗವದ್ಗೀತೆ ಒಂದು ಧರ್ಮದ ಗ್ರಂಥವಲ್ಲ, ಎಲ್ಲರೂ ಓದಬೇಕಾದ ಪುಸ್ತಕ: ಪ್ರತಾಪ್ ಸಿಂಹ

'ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವ ಸಂದರ್ಭದಲ್ಲಿ ಸರ್ಕಾರ ಮಕ್ಕಳ ಮನಸ್ಸನ್ನು ಕಲ್ಮಶ ಮಾಡಲು ಮುಂದಾಗಿದೆ. ಇದು ನಮ್ಮ ಏಕತೆಗೆ ಅಪಾಯ ತಂದೊಡ್ಡುತ್ತದೆ. ಧರ್ಮ ಹಾಗೂ ಶಿಕ್ಷಣವನ್ನು ಮಿಶ್ರಣ ಮಾಡಬಾರದು. ಇದು ರಾಜ್ಯದ ವಾತಾವರಣ ಹಾಳು ಮಾಡುತ್ತದೆ. ಹಾಗಾಗಿ ಸರ್ಕಾರ ಇನ್ನಷ್ಟು ಪುನರ್ ವಿಮರ್ಶಿಸಬೇಕು' ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.