Asianet Suvarna News Asianet Suvarna News

Bhagavad Gita: ಭಗವದ್ಗೀತೆ ಒಂದು ಧರ್ಮದ ಗ್ರಂಥವಲ್ಲ, ಎಲ್ಲರೂ ಓದಬೇಕಾದ ಪುಸ್ತಕ: ಪ್ರತಾಪ್ ಸಿಂಹ

ಭಗವದ್ಗೀತೆ ಒಂದು ಧರ್ಮದ ಪುಸ್ತಕ ಅಲ್ಲ, ಅದರಲ್ಲಿ ಜೀವನದ ಸತ್ಯವಿದೆ. ನೈತಿಕ ವಿಚಾರಗಳಿವೆ. ಹಾಗಾಗಿ ಭಗವದ್ಗೀತೆ ಎಲ್ಲರೂ ಓದಬೇಕಾದ ಪುಸ್ತಕ. ಬೇರೆ ಧರ್ಮಗಳ ಧಾರ್ಮಿಕ ಗ್ರಂಥಗಳ ರೀತಿಯಲ್ಲಿ ನೋಡಲು ಹೋಗಬೇಡಿ' ಎಂದು ಸಂಸದ ಪ್ರತಾಪ್ ಸಿಂಹ ಭಗವದ್ಗೀತೆ ಅಳವಡಿಕೆಗೆ ಬೆಂಬಲ ಸೂಚಿಸಿದ್ದಾರೆ. 

ಬೆಂಗಳೂರು (ಮಾ. 19): ಭಗವದ್ಗೀತೆ ಒಂದು ಧರ್ಮದ ಪುಸ್ತಕ ಅಲ್ಲ, ಅದರಲ್ಲಿ ಜೀವನದ ಸತ್ಯವಿದೆ. ನೈತಿಕ ವಿಚಾರಗಳಿವೆ. ಹಾಗಾಗಿ ಭಗವದ್ಗೀತೆ ಎಲ್ಲರೂ ಓದಬೇಕಾದ ಪುಸ್ತಕ. ಬೇರೆ ಧರ್ಮಗಳ ಧಾರ್ಮಿಕ ಗ್ರಂಥಗಳ ರೀತಿಯಲ್ಲಿ ನೋಡಲು ಹೋಗಬೇಡಿ. ನೈತಿಕತೆಯನ್ನು ತಿಳಿಸಲು ಇದಕ್ಕಿಂತ ದೊಡ್ಡ ಪುಸ್ತಕ ಸಿಗಲು ಸಾಧ್ಯವಿಲ್ಲ' ಎಂದು ಸಂಸದ ಪ್ರತಾಪ್ ಸಿಂಹ ಭಗವದ್ಗೀತೆ ಅಳವಡಿಕೆಗೆ ಬೆಂಬಲ ಸೂಚಿಸಿದ್ದಾರೆ. 

ಕಾಂಗ್ರೆಸ್‌ಗೆ ಸಾಫ್ಟ್, ಹಾರ್ಡ್ ಹಿಂದುತ್ವ ಎಂದಿಲ್ಲ, ಹಿಂದೂ ಧರ್ಮದಲ್ಲಿ ನಂಬಿಕೆ ಇದೆ: ಸಿದ್ದರಾಮಯ್ಯ

ಗುಜರಾತ್‌ನಲ್ಲಿ 6ರಿಂದ 12ನೇ ತರಗತಿಯ ಪಠ್ಯದಲ್ಲಿ ಭಗವದ್ಗೀತೆ ಸೇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ನಮ್ಮ ರಾಜ್ಯದಲ್ಲೂ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೊಳಿಸುವ ಕುರಿತು ಚರ್ಚೆ ಆರಂಭವಾಗಿದೆ. 

Video Top Stories