ಸರ್ಕಾರಿ ಶಾಲೆಗೆ ಕಲಾ ಸ್ಪರ್ಶ, ಹೈಟೆಕ್ ಲುಕ್, ಒಳ ಹೋದರೆ ರಾಜ್ಯ ಸುತ್ತಿದ ಅನುಭವ..!

ಕಲರ್ ಕಲರ್ ಪೇಂಟಿಂಗ್.. ಒಂದಕ್ಕಿಂತ ಒಂದು ಸೂಪರ್.. ಗೋಡೆ ಮೇಲೆ ಸೃಷ್ಟಿಯಾಗಿರೋ ಕಲಾ ಲೋಕದಲ್ಲಿ ಮಕ್ಕಳಂತೂ ಕಳೆದು ಹೋಗಿದಾರೆ. ಈ 'ಕಲಾ ಕಲರವ' ಸೃಷ್ಟಿಯಾಗಿರೋದು ಗದಗ ತಾಲೂಕಿನ ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಗೋಡೆ ಮೇಲೆ.

First Published Oct 30, 2021, 11:18 AM IST | Last Updated Oct 30, 2021, 6:00 PM IST

ಗದಗ (ಅ. 30): ಕಲರ್ ಕಲರ್ ಪೇಂಟಿಂಗ್.. ಒಂದಕ್ಕಿಂತ ಒಂದು ಸೂಪರ್.. ಗೋಡೆ ಮೇಲೆ ಸೃಷ್ಟಿಯಾಗಿರೋ ಕಲಾ ಲೋಕದಲ್ಲಿ ಮಕ್ಕಳಂತೂ ಕಳೆದು ಹೋಗಿದಾರೆ. ಈ 'ಕಲಾ ಕಲರವ' ಸೃಷ್ಟಿಯಾಗಿರೋದು ಗದಗ (Gadag) ತಾಲೂಕಿನ ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಗೋಡೆ ಮೇಲೆ.

ಕಾರವಾರ: ಪಾದಯಾತ್ರೆ, ಮೂಲಕವೇ 15 ರಾಜ್ಯ ಸುತ್ತಿದ ಯುವಕ

 ಶತಮಾನದ ಶಾಲೆಗೆ ಸದ್ಯ ಹೈಟೆಕ್ ಟಚ್ ನೀಡಲಾಗಿದ್ದು ನೋಡುಗರ ಮನಸೂರೆಗೊಳ್ಳುತ್ತಿದೆ. ಶಾಲೆ ಎಂಟ್ರಿಗೆ ಐತಿಹಾಸಿಕ ಸ್ಥಳಗಳ ಕಲರ್ ಕಲರ್ ಚಿತ್ರ ಮನಸೆಳೆಯುತ್ತೆ.  ಹಂಪಿ, ಮೈಸೂರು ದಸರಾ ವೈಭವ, ಗದಗನ ವೀರನಾರಾಯಣ ದೇವಸ್ಥಾನ ಸೇರಿದಂತೆ ಅನೇಕ ಚಿತ್ರಗಳನ್ನ ಬಿಡಿಸಲಾಗಿದ್ದು, ಶಾಲೆ ಕಾಂಪೌಂಡ್ ನೋಡ್ತಿದ್ರೆ ರಾಜ್ಯ ಸುತ್ತಿದ ಅನುಭವ ನೀಡುತ್ತೆ.‌ ದ್ವಾರದ ಕಮಾನಿಗೆ ಡೂಡಲ್ ಶೈಲಿಯ ಚಿತ್ರಕಲೆ ಬಿಡಿಸಲಾಗಿದ್ದು ಸಖತ್ ಎಟ್ರಾಕ್ಟಿವ್ ಆಗಿದೆ. 1881 ರಲ್ಲೇ ಸ್ಥಾಪನೆಯಾದ ಶಾಲೆಗೆ ಹೈಟೆಕ್ ಟಚ್ ನೀಡಬೇಕು ಎಂದು ಶಾಲೆ ಶಿಕ್ಷಕರು ಯೋಜನೆ ರೂಪಿಸಿದರು. ಐದು ಲಕ್ಷ ರೂಪಾಯಿ ಅನುದಾನದಲ್ಲಿ ಹೈಟೆಕ್ ಲ್ಯಾಬ್ ಸ್ಥಾಪಿಸಲಾಗಿದೆ..