Good News For Teachers: ಕೊರೋನಾ ವೇಳೆ ರಜೆ ಪಡೆಯದೇ ಕರ್ತವ್ಯಕ್ಕೆ ಬಂದ ಶಿಕ್ಷಕರಿಗೆ ಗುಡ್‌ನ್ಯೂಸ್!

ಕೋವಿಡ್ (Covid 19) ಸಂದರ್ಭದಲ್ಲಿ ಶಿಕ್ಷಕರು (Teachers) ಅವಿರತವಾಗಿ ಕೆಲಸ ಮಾಡಿದ್ದರು. ಬೇಸಿಗೆ ರಜೆ, ದಸರಾ ಸಮಯದಲ್ಲೂ ರಜೆ ಪಡೆಯದೇ ಕೆಲಸ ಮಾಡಿದ್ದರು. ಅವರಿಗೆ ಗಳಿಕೆ ರಜೆ ಪಡೆಯುವ ಅರ್ಹತೆ ಇದ್ದರೂ, ಮೇಲಧಿಕಾರಿಗಳು ಅವಕಾಶ ನೀಡಿರಲಿಲ್ಲ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 08): ಕೋವಿಡ್ (Covid 19) ಸಂದರ್ಭದಲ್ಲಿ ಶಿಕ್ಷಕರು (Teachers) ಅವಿರತವಾಗಿ ಕೆಲಸ ಮಾಡಿದ್ದರು. ಬೇಸಿಗೆ ರಜೆ, ದಸರಾ ಸಮಯದಲ್ಲೂ ರಜೆ ಪಡೆಯದೇ ಕೆಲಸ ಮಾಡಿದ್ದರು. ಅವರಿಗೆ ಗಳಿಕೆ ರಜೆ ಪಡೆಯುವ ಅರ್ಹತೆ ಇದ್ದರೂ, ಮೇಲಧಿಕಾರಿಗಳು ಅವಕಾಶ ನೀಡಿರಲಿಲ್ಲ. 

Omicron Threat: ಶಾಲೆ ಬಂದ್ ಮಾಡುವ ಪರಿಸ್ಥಿತಿ ಬಂದ್ರೆ ಸರ್ಕಾರ ಸಿದ್ಧ, ಆತಂಕ ಬೇಡ: ಬಿ ಸಿ ನಾಗೇಶ್

ರಜೆ ನೀಡಿ (Leave) ಎಂದು ಶಿಕ್ಷಕರೂ ಮನವಿ ಮಾಡಿದರೂ, ರಜೆ ನೀಡದೇ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಶಿಕ್ಷಣ ಸಚಿವ ಬಿ ಸಿ ನಾಗೇಶ್, (BC Nagesh) ಕೊರೋನಾ ವೇಳೆ ಕರ್ತವ್ಯಕ್ಕೆ ಬಂದಿದ್ದ ಶಿಕ್ಷಕರಿಗೆ ಗಳಿಕೆ ರಜೆ (Paid Leaves) ನೀಡಿ ಎಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 

Related Video