ದಯವಿಟ್ಟು ಶಿಕ್ಷಣ ವ್ಯವಸ್ಥೆ ಬದಲಾಯಿಸಲು ಹೋಗಬೇಡಿ: ಪ್ರಿಯಾಂಕ್ ಖರ್ಗೆ
ಶಾಲಾ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಹೋಗಬೇಡಿ. ಕರ್ನಾಟಕ ಪ್ರಗತಿ ಕಾಣುತ್ತಿರುವ ರಾಜ್ಯವಾಗಿದೆ. ಅದಕ್ಕೆ ಮೂಲ ಕಾರಣ ನಮ್ಮ ಶಿಕ್ಷಣದ ವ್ಯವಸ್ಥೆ ಎಂದಿದ್ದಾರೆ
ಬೆಂಗಳೂರು(ಮಾ.18): ರಾಜ್ಯದ ಪ್ರಾಥಮಿಕ ಶಾಲಾ ಹಂತದ ಪಠ್ಯ ಪುಸ್ತಕದಲ್ಲಿ (Text Book) ಭಗವದ್ಗೀತೆ (Bhagavad Gita) ಸೇರಿಸುವ ಕುರಿತು ಚರ್ಚೆ ಶುರುವಾಗಿದೆ. ಈ ಬಗ್ಗೆ ವಿಧಾನ ಸೌಧದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಗುಜರಾತ್ ಮಾದರಿಯಲ್ಲಿ Bhagavad Gita ಪಠ್ಯ ಜಾರಿ ಇಲ್ಲ, ಬಿಸಿ ನಾಗೇಶ್
ಕರ್ನಾಟಕ (Karnataka) ಯಾವಾಗಲೂ ಪ್ರತಿಪರ ಚಿಂತನೆ ಇರುವಂತಹ ಒಂದು ರಾಜ್ಯವಾಗಿದೆ. ಜೊತೆಗೆ ಆರ್ಥಿಕವಾಗಿ ಪ್ರಗತಿ ಕಾಣುತ್ತಿರುವ ರಾಜ್ಯವಾಗಿದೆ. ಅದಕ್ಕೆ ಮೂಲ ಕಾರಣ ನಮ್ಮ ಶಿಕ್ಷಣದ (education) ವ್ಯವಸ್ಥೆ, ಮಕ್ಕಳು ಈಗಾಗಲೇ ಕೊರೋನಾದಿಂದ ಶಿಕ್ಷಣ ವಂಚಿತರಾಗಿದ್ದಾರೆ. ಶಾಲಾ ಕಟ್ಟಡಗಳ ಸುವ್ಯವಸ್ಥೆ, ಮೂಲ ಸೌಕರ್ಯಗಳ ಕಡೆ ಗಮನ ಹರಿಸಿ ಕೊಡಿ, ಹೈಕಮಾಂಡ್ ಮನವೊಲಿಸಲು ಇಂತಹ ಕ್ರಮಗಳನ್ನು ತರಲು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.