JNU ಮೊಟ್ಟ ಮೊದಲ ಮಹಿಳಾ ಉಪ ಕುಲಪತಿ ಶಾಂತಿಶ್ರೀ ಧೂಳಿಪುಡಿ ಸಂದರ್ಶನ

ಪುರುಷರು ಮಹಿಳೆಯರು ಮೇಲಕ್ಕೆ ಬರುವುದನ್ನು ಇಷ್ಟಪಡುವುದಿಲ್ಲ ಎಂದು ಜೆಎನ್‌ಯು ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

First Published Mar 22, 2022, 9:48 PM IST | Last Updated Mar 22, 2022, 9:48 PM IST

ನವದೆಹಲಿ(ಮಾ.22): ಫೆಬ್ರವರಿಯಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (Jawaharlal Nehru University) ನೂತನ  ಉಪಕುಲಪತಿಯಾಗಿ (Vice Chancellor) ನೇಮಕವಾದ ಶಾಂತಿಶ್ರೀ ಧೂಳಿಪುಡಿ ಪಂಡಿತ್ (Santishree Dhulipudi Pandit) ಅವರು ಮಹಿಳೆಯೊಬ್ಬಳು ಮೇಲಕ್ಕೆ ಬಂದರೆ, ಪುರುಷರು ಮಹಿಳೆಯರು ಮೇಲಕ್ಕೆ ಬರುವುದನ್ನು ಇಷ್ಟಪಡುವುದಿಲ್ಲ" ಎಂದು ಜೆಎನ್‌ಯು ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು  ಏಷ್ಯಾನೆಟ್ ನ್ಯೂಸ್ ಜೊತೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಪಠ್ಯದಲ್ಲಿ Bhagavad Gita ಅಳವಡಿಸಲು ಸಮಿತಿ ರಚನೆ

ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಉಪಕುಲಪತಿಯಾಗಿ ತಮ್ಮ ಮುಂದಿರುವ ಸವಾಲುಗಳನ್ನು ಪಟ್ಟಿ ಮಾಡಿದ ಅವರು ಜೆಎನ್‌ಯು 103 ಕೋಟಿ ರೂಪಾಯಿಗಳ ಬಜೆಟ್ ಕೊರತೆಯನ್ನು ಹೊಂದಿದೆ. ಸೈದ್ಧಾಂತಿಕವಾಗಿ, ವಿದ್ಯಾರ್ಥಿಗಳು ಬದ್ಧರಾಗಿದ್ದಾರೆಂದು ನಾನು ಭಾವಿಸುವುದಿಲ್ಲ. ಎಲ್ಲರೂ ಒಳ್ಳೆಯವರೇ. ಅವರಿಗೆ ಸಮಸ್ಯೆಗಳಿರಬಹುದು, ನಾವು ಪರಿಹರಿಸಿದರೆ ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಎರಡನೆಯದು ಅಧ್ಯಾಪಕರಿಗೆ ಬಡ್ತಿ ಮತ್ತು ಹುದ್ದೆಗಳ ಜಾಹೀರಾತು. ನಮ್ಮಲ್ಲಿ ಶಿಕ್ಷಕರಿಗೆ ಸುಮಾರು 300 ಮತ್ತು ಬೋಧಕೇತರ ಸಿಬ್ಬಂದಿಗೆ 450 ಹುದ್ದೆಗಳಿವೆ. ತದನಂತರ ಮೂಲಸೌಕರ್ಯ ಸಮಸ್ಯೆಗಳಿವೆ. ಈ ಎಲ್ಲದಕ್ಕೂ ನಾವು ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಕಡೆಗೆ ನೋಡುತ್ತಿದ್ದೇವೆ ಏಕೆಂದರೆ ಸರ್ಕಾರ ಮಾತ್ರ ಎಲ್ಲವನ್ನೂ ನೀಡಲು ಸಾಧ್ಯವಿಲ್ಲ.

Video Top Stories