ಪಠ್ಯದಲ್ಲಿ Bhagavad Gita ಅಳವಡಿಸಲು ಸಮಿತಿ ರಚನೆ
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶಾಲಾ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆ ಕುರಿತು ಪರಿಶೀಲಿಸಲು ಶಿಕ್ಷಣ ಇಲಾಖೆ ಸಮಿತಿಯೊಂದನ್ನು ರಚಿಸಲಿದೆ ಎಂದಿದ್ದಾರೆ.
ಬೆಂಗಳೂರು (ಮಾ.22): ಶಾಲಾ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆ ಕುರಿತು ಪರಿಶೀಲಿಸಲು ಶಿಕ್ಷಣ ಇಲಾಖೆ ಸಮಿತಿಯೊಂದನ್ನು ರಚಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Primary and Secondary Education Minister BC Nagesh) ಅವರು ಸೋಮವಾರ ಹೇಳಿದ್ದಾರೆ.
ವಿಧಾನಪರಿಷತ್ನ ಶೂನ್ಯ ವೇಳೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಪ್ರಾಣೇಶ್ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಶಾಲೆಗಳಲ್ಲಿ ಭಗವದ್ಗೀತೆ ಅಳವಡಿಕೆ ಬಗ್ಗೆ ಮುಖ್ಯಮಂತ್ರಿಗಳು ಮತ್ತು ತಜ್ಞರೊಂದಿಗೆ ಚರ್ಚಿಸಿದ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಶಾಲೆಗಳಲ್ಲಿ ನೈತಿಕ ಶಿಕ್ಷಣದ ಅಗತ್ಯತೆ ಕುರಿತು ಪರಿಷತ್ತಿನ ಒಳಗೆ ಮತ್ತು ಹೊರಗೆ ಸಾಕಷ್ಟು ಚರ್ಚೆಗಳು ನಡೆದಿವೆ. “ಭಗವದ್ಗೀತೆಯನ್ನು ಪರಿಚಯಿಸುವ ಅಗತ್ಯತೆಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ ಮತ್ತು ಅನೇಕರು ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರ ಸಮಿತಿ ರಚಿಸಿ, ಸಿಎಂ ಹಾಗೂ ಇತರರೊಂದಿಗೆ ಚರ್ಚಿಸಿ, ಪರಿಚಯಿಸುವ ಕುರಿತು ಚಿಂತನೆ ನಡೆಸಲಿದೆ ಎಂದು ತಿಳಿಸಿದರು.
ಪ್ರಾಣೇಶ್ ಮಾತನಾಡಿ, ರಾಜ್ಯ ಸರ್ಕಾರವು 2022-23ನೇ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪರಿಚಯಿಸಬೇಕು. ಗುಜರಾತ್‌ನಲ್ಲಿ ಸರ್ಕಾರವು 6 ರಿಂದ 12 ನೇ ತರಗತಿಯವರೆಗೆ ಭಗವದ್ಗೀತೆಯನ್ನು ಪರಿಚಯಿಸಿದೆ ಎಂದು ಹೇಳಿದರು.
SHIVAMOGGA: ಶಾಲೆಯಲ್ಲೇ ನಮಾಜ್‌ಗೆ ಪರ್ಮಿಷನ್: ಮುಖ್ಯಶಿಕ್ಷಕಿ ಸಸ್ಪೆಂಡ್
ಭಗವದ್ಗೀತೆಯಲ್ಲಿ ಇನ್ನೊಬ್ಬರ ಕೈ ಕಡೀರಿ, ಕಾಲು ತೆಗೀರಿ ಅಂತಾ ಹೇಳಿಲ್ಲ: ಶಾಲಾ ಪಠ್ಯದಲ್ಲಿ (School Syllabus) ಭಗವದ್ಗೀತೆ (Bhagavad Gita) ಅಳವಡಿಸುವ ವಿಚಾರದ ಬಗ್ಗೆ ಕರ್ನಾಟಕದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರ ಶುರುವಾಗಿದೆ.
ಇನ್ನು ಈ ಬಗ್ಗೆ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ (Bhagavad Gita In School Syllabus ) ವಿಚಾರದಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆ ಸಚಿವ ಸಿಸಿ ಪಾಟೀಲ್ (CC Patil) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗದಗದಲ್ಲಿ(Gadag) ಪತ್ರಿಕಾಗೋಷ್ಠಿಯಲ್ಲಿ ಮಾತ್ನಾಡಿದ ಅವರು, ಬೇರೆ ಪುಸ್ತಕದಲ್ಲಿ ಹೇಳಿದಂತೆ ಭಗವದ್ಗೀತೆಯಲ್ಲಿ ಹಿಂಸೆ ಬಗ್ಗೆ ಹೇಳಿಲ್ಲ ಎಂದರು.. ಪಠ್ಯದಲ್ಲಿ ಭಗವದ್ಗೀತೆ ವಿಚಾರದ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರಕ್ಕೆ, ನಾನು ಹೇಳಿದರೆ ಅಪಾರ್ಥವಾಗುತ್ತದೆ. ಭಗವದ್ಗೀತೆ ಬದಲಾಗಿ ಬೇರೆ ಪುಸ್ತಕ (ಹಿಂದೂ ಹೊರತಾದ ಧರ್ಮ ಗ್ರಂಥ) ಸೇರಿಸುತ್ತೇವೆ ಅಂದಿದ್ದರೆ ಅದನ್ನ ಸ್ವಾಗತಿಸುತ್ತಿದ್ದರು.. ಆ ಪುಸ್ತಕ ಯಾವ್ದು ಅಂತ ನಿಮಗೇ ಗೊತ್ತು ಅಂತಾ ಹೇಳಿದ್ರು.. ಅಲ್ದೆ, ರಾಮನರದಲ್ಲಿ ಏಸು ಪ್ರತಿಮೆ ವಿಚಾರ ಎಳೆತಂದ ಸಿಸಿ ಪಾಟೀಲ, ಗುಡ್ಡವನ್ನೇ ಕ್ರಿಶ್ಚಿಯನ್ ರಿಗೆ ಕೊಡೋದಕ್ಕೆ ಹೊರಟಿದ್ದರು ಎಂದು ಡಿಕೆಶಿವಕುಮಾರ್ ಕಾಲೆಳೆದರು.
NCEE survey: ಲಾಕ್‌ಡೌನ್ ನಂತರ ಮೂಲಭೂತ ಕೌಶಲ್ಯ ಕಳೆದುಕೊಂಡ ಮಕ್ಕಳು!
ಭಗವದ್ಗೀತೆ ವಿಚಾರ ಈಗ ಇನ್ನೂ ಚರ್ಚೆಯಲ್ಲಿದೆ.. ಈಗ ಯಾಕೆ ಸುಮ್ಮನೇ ಮಾತಾಡ್ಬೇಕು.. ಸತ್ಯವನ್ನ ಬಿಟ್ಟು ಬೇರೇನೂ ಹೇಳಲ್ಲ ಅಂತಾ ಗೀತೆಯ ಮೇಲೆ ಪ್ರಮಾಣಮಾಡಿ ಕೋರ್ಟ್ ನಲ್ಲಿ ಮಾತಾಡ್ತೀವಿ.. ಇಂಥ ಮೌಲ್ಯ ಇರುವ ಭಗವದ್ಗೀತೆ ಪಠ್ಯದಲ್ಲಿ ಅವಳವಡಿಸಿಕೊಳ್ಳಲು ತಪ್ಪೇನಿದೆ.. ಭಗವದ್ಗೀತೆ ಒಂದು ಜಾತಿಗೆ ಸಂಬಂಧಪಟ್ಟದಲ್ಲ.. ಕರ್ಮ ನೀನು ಮಾಡು.. ಫಲವನ್ನ ನನಗೆ ಬಿಡು ಅಂತಾ ಕೃಷ್ಣ ಹೇಳಿದ್ದಾನೆ ಇದೇ ಆಧಾರದಲ್ಲಿ ಭಗವದ್ಗೀತೆ ಇದೆ ಎಂದರು.
ಗುಜರಾತ್ ನಲ್ಲಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿರುವ ಮಾದರಿಯಲ್ಲೇ ಕರ್ನಾಟಕ ರಾಜ್ಯದಲ್ಲೂ ಅಳವಡಿಸಲು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುವುದಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. ಪಠ್ಯದಲ್ಲಿ ಭಗವದ್ಗೀತೆ ವಿಚಾರಗಳನ್ನು ಅಳವಡಿಸುವ ಬಗ್ಗೆ ರಾಜಕೀಯ ನಾಯಕರ ಪರ-ವಿರೋಧಗಳು ವ್ಯಕ್ತವಾಗುತ್ತಿವೆ.