Asianet Suvarna News Asianet Suvarna News

ಕವರ್ ಸ್ಟೋರಿ: ಈ ಶಾಲೆಯಲ್ಲಿ ಫೀಸ್ ಕಟ್ಟಿಲ್ಲ ಅಂದ್ರೆ ಮಕ್ಕಳಿಗೆ ಬ್ಲ್ಯಾಕ್ ರೂಂ ಟಾರ್ಚರ್..!

- ಫೀಸ್ ಕಟ್ಟುವಂತೆ ಪೋಷಕರ ಮೇಲೆ ಖಾಸಗಿ ಶಾಲೆಗಳ ಒತ್ತಡ

- ಪೋಷಕರು ಪ್ರತಿಭಟನೆ ಮಾಡಿದರೂ ಸರ್ಕಾರ ಇವರ ಅಳಲನ್ನು ಕೇಳುತ್ತಿಲ್ಲ

- ಇಂತಹ ಪೋಷಕರು ಕವರ್‌ ಸ್ಟೋರಿ ತಂಡಕ್ಕೆ ಪತ್ರ ಬರೆಯುತ್ತಾರೆ. 

ಬೆಂಗಳೂರು (ಜೂ. 19): ಖಾಸಗಿ ಶಾಲೆಗಳು ಫೀಸ್ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ಹಾಕುತ್ತಿದೆ. ಫೀಸ್ ಕಟ್ಟದೇ ಇರುವ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ನಿಷೇಧಿಸಲಾಗುತ್ತಿದೆ. ಇದನ್ನು ವಿರೋಧಿಸಿ ಪೋಷಕರು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದರೂ ಸರ್ಕಾರ ಇವರ ಅಳಲನ್ನು ಕೇಳುತ್ತಿಲ್ಲ. ಇಂತಹ ಪೋಷಕರು ಕವರ್‌ ಸ್ಟೋರಿ ತಂಡಕ್ಕೆ ಪತ್ರ ಬರೆಯುತ್ತಾರೆ. 

ಸುಳ್ಯ: ವಿದ್ಯಾರ್ಥಿಗಳಿಗೆ ಸಿಗದ ನೆಟ್ವರ್ಕ್, ಬೆಟ್ಟದ ಮೇಲಿನ ಟೆಂಟೇ ಪಾಠಶಾಲೆ!

ಕೆಲವು ಶಾಲೆಗಳು ಫೀಸ್ ಕಟ್ಟದ ಮಕ್ಕಳನ್ನು ಬ್ಲ್ಯಾಕ್ ರೂಮ್‌ಗೆ ಹಾಕುತ್ತಿವೆ. ಪದ್ಮನಾಭ ನಗರದ ಕಾರ್ಮೆಲ್ ಶಾಲೆಯಲ್ಲಿ ಮಕ್ಕಳನ್ನು ಬ್ಲ್ಯಾಕ್ ರೂಮ್‌ಗೆ ಹಾಕಿ ಚಿತ್ರಹಿಂಸೆ ನೀಡಿರುತ್ತಾರೆ. ಇದನ್ನು ಬಹಿರಂಗವಾಗಿ ಹೇಳಿದರೆ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಇಂತಹ ಶಾಲೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತನ್ನಿ ಪತ್ರ ಬರೆಯಲಾಗಿತ್ತು. ಇದರ ರಿಯಾಲಿಟಿಗೆ ಕವರ್ ಸ್ಟೋರಿ ತಂಡ ನಡೆಸಿದ ಕಾರ್ಯಾಚರಣೆ ಹೀಗಿತ್ತು. 

Video Top Stories