ಡ್ರೆಸ್‌ಕೋಡ್ ಇದ್ರೆ ವಿದ್ಯಾರ್ಥಿಗಳು ಪಾಲಿಸಲೇಬೇಕು, ಇಲ್ಲದಿದ್ರೆ ನಿಮ್ಮಿಷ್ಟದ ವಸ್ತ್ರ ಓಕೆ: ಸಿಎಂ
ವಿಧಾನಸಭೆಯಲ್ಲಿ ಹಿಜಾಬ್ (Hijab) ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ (Siddaramaiah) ಕಾಲೇಜು ಡ್ರೆಸ್ ಕೋಡ್ ಬಗ್ಗೆ ಸ್ಪಷ್ಟಪಡಿಸುವಂತೆ ಸಿಎಂ ಬೊಮ್ಮಾಯಿಯವರನ್ನು (CM Bommai) ಒತ್ತಾಯಿಸಿದ್ದಾರೆ.
ಬೆಂಗಳೂರು (ಫೆ. 16): ವಿಧಾನಸಭೆಯಲ್ಲಿ ಹಿಜಾಬ್ (Hijab) ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ (Siddaramaiah) ಕಾಲೇಜು ಡ್ರೆಸ್ ಕೋಡ್ ಬಗ್ಗೆ ಸ್ಪಷ್ಟಪಡಿಸುವಂತೆ ಸಿಎಂ ಬೊಮ್ಮಾಯಿಯವರನ್ನು (CM Bommai) ಒತ್ತಾಯಿಸಿದ್ದಾರೆ.
Hijab Row: ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಹೆಮ್ಮೆ, ಪ್ರಾಣ ಹೋದರೂ ತೆಗೆಯಲ್ಲ: ವಿದ್ಯಾರ್ಥಿನಿ
ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಸಮವಸ್ತ್ರ ಇದ್ದರೆ ಸಮವಸ್ತ್ರ ತೊಟ್ಟು ತರಗತಿಗೆ ಬರಬೇಕು, ಇಲ್ಲದಿದ್ದರೆ ನಿಮ್ಮಿಷ್ಟದ ವಸ್ತ್ರ ಒಕೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಇದೇ ಮಾತನ್ನು ಸಿಎಂ ಪುನರುಚ್ಚರಿಸಿದ್ಧಾರೆ.
ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಫೆ. 16 ರಿಂದ ಭೌತಿಕ ತರಗತಿಗಳು ಪುನಾರಂಭಗೊಳ್ಳುತ್ತವೆ. ಈ ಸಂಸ್ಥೆಗಳಲ್ಲಿ ಎಲ್ಲೆಲ್ಲಿ ಈಗಾಗಲೇ ಸಮವಸ್ತ್ರದ ನಿಯಮವಿದೆಯೋ ಅಲ್ಲೆಲ್ಲಾ ವಿದ್ಯಾರ್ಥಿಗಳು ಅದನ್ನು ಪಾಲಿಸಬೇಕು. ಉಳಿದೆಡೆಗಳಲ್ಲಿ ಸಮವಸ್ತ್ರ ಇಲ್ಲದಿದ್ದರೂ ಕೋರ್ಟ್ ನಿಯಮಕ್ಕೆ ಅನುಸಾರವಾಗಿ ಉಡುಪು ಹಾಕಿಕೊಂಡು ಬರಲು ಅವಕಾಶವಿದೆ ಎಂದು ಅಶ್ವತ್ ನಾರಾಯಣ್ ತಿಳಿಸಿದ್ದಾರೆ.