Reva University; ರೇವಾ ವಿವಿಯಲ್ಲಿ ಪಂಚಭೂತಗಳ ಮಹತ್ವ, ರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮ

ದಕ್ಷಿಣ ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ರೇವಾ ವಿಶ್ವವಿದ್ಯಾಲಯದಲ್ಲಿ ಪಂಚವತ್ರಂ ಕಾರ್ಯಕ್ರಮ ವಿಜೃಂಣೆಯಿಂದ ನಡೆಯಿತು, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸನ ಪ್ರಾದೇಶಿಕ ನಿರ್ದೇಶಕರಾದ ಡಿ ಮಹೇಂದ್ರ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು

Share this Video
  • FB
  • Linkdin
  • Whatsapp

ಬೆಂಗಳೂರು (ನ.19): ದಕ್ಷಿಣ ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ರೇವಾ ವಿಶ್ವವಿದ್ಯಾಲಯದಲ್ಲಿ ಪಂಚವತ್ರಂ ಕಾರ್ಯಕ್ರಮ ವಿಜೃಂಣೆಯಿಂದ ನಡೆಯಿತು, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸನ ಪ್ರಾದೇಶಿಕ ನಿರ್ದೇಶಕರಾದ ಡಿ ಮಹೇಂದ್ರ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು, ಕಾರ್ಯಕ್ರಮದ್ಲಲಿ ರೇವಾ ವಿಶ್ವವಿದ್ಯಾನಿಲಯದ ಕುಲಾಧಿಪತಿ ಶ್ಯಾಮರಾಜು ಹಾಗೂ ವೈಸ್ ಚಾನ್ಸಲರ್ ಧನಂಜಯ್ ಭಾಗಿಯಾಗಿದ್ದರು. ಪಂಚವತ್ರಂ ಈ ಬ್ರಹ್ಮಾಂಡ ಸ್ಥಾಪಿತವಾಗಿರುವ ಶಿವನ ಐದು ತತ್ವಗಳಾದ ಅಗ್ನಿ, ಆಕಾಶ ,ಭೂಮಿ, ಜಲ, ವಾಯು ಪರಿಕಲ್ಪನೆಯಲ್ಲಿ ನೃತ್ಯ ಸಂಯೋಜನೆ ಮಾಡಲಾಗಿತ್ತು. ಪಂಚಭೂತಗಳ ಮಹತ್ವ ಹಾಗು ಮುಂದಿನ ಪೀಳಿಗೆಗಾಗಿ ಪಂಚಭೂತಗಳ ರಕ್ಷಣೆ ಮಾಡಬೇಕು ಎಂಬ ಪರಿಕಲ್ಪನೆಯಲ್ಲಿ, ಭಾರತದ ಐದು ನೃತ್ಯ ಪ್ರಕಾರಗಲ್ಲಿ ಐದು ನೃತ್ಯ ತಂಡಗಳು ತಮ್ಮ ಪ್ರತಿಭೆಯನ್ನ ಪ್ರದರ್ಶನ ಮಾಡಿದವು.

Related Video