ರಾಜ್ಯಕ್ಕೆ ಇಂದು ಪ್ರಧಾನಿ ಆಗಮನ; ಧಾರವಾಡದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ
ಧಾರವಾಡದಲ್ಲಿ ದೇಶದ ಪ್ರಥಮ ಪರಿಸರಸ್ನೇಹಿ ಐಐಟಿ ಕ್ಯಾಂಪಸ್ ಲೋಕಾರ್ಪಣೆ, ಹುಬ್ಬಳ್ಳಿಯಲ್ಲಿನ ‘ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್’ಅನ್ನು ಅನಾವರಣ ಮಾಡಲಿದ್ದಾರೆ ಪ್ರಧಾನಿ ಮೋದಿ.
ಧಾರವಾಡಕ್ಕೆ ಇಂದು ಮೋದಿ, 852 ಕೋಟಿ ರು.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಐಐಟಿಯ ನೂತನ ಕ್ಯಾಂಪಸ್‌ನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ರಾಜ್ಯದ ಮೊದಲ ಹಾಗೂ ದೇಶದ ಪ್ರಪ್ರಥಮ ಹಸಿರು ಐಐಟಿ ಎಂಬ ಖ್ಯಾತಿಗೆ ಇದು ಒಳಗಾಗಿದೆ. ಇದೇ ವೇದಿಕೆಯಲ್ಲಿ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ’ದಲ್ಲಿ ನಿರ್ಮಾಣವಾಗಿರುವ 1.5 ಕಿ.ಮೀ. ಉದ್ದದ ‘ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾಮ್‌ರ್’ನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಜೊತೆಗೆ, ಹಂಪಿ ಸ್ಮಾರಕ ಮಾದರಿಯ ಹೊಸಪೇಟೆ ರೈಲು ನಿಲ್ದಾಣಕ್ಕೂ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಉಭಯ ನಗರಗಳಲ್ಲಿ 6,528 ಕೋಟಿ ವೆಚ್ಚದ 20 ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಜೊತೆಗೆ, 4,689 ಕೋಟಿ ವೆಚ್ಚದ 6 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಪ್ರಧಾನಿ.