ಅಂಕಲ್ ಕೊಲೆಗೆ ಹೊಂಚು ಹಾಕಿತ್ತು ಕುಟುಂಬ! ವೈರಲ್ ಫೋಟೋದಿಂದ ಅವನ ಸುಳಿವು ಸಿಕ್ಕಿತ್ತು!
ಸಂತೆಬೆನ್ನೂರಿಗೆ ಕೆಲಸದ ಮೇಲೆ ಹೋದವನು ನೆಲ್ಲೂರಿನಲ್ಲಿ ಹೆಣವಾಗಿ ಸಿಕ್ಕಿದ್ದ ಸಿದ್ದಲಿಂಗಪ್ಪ. ತನಿಖೆ ನಡೆಸುತ್ತಿದ್ದ ಪೊಲೀಶರಿಗೆ ಸತ್ತವನ ಕುಟುಂಬ ಹೆಳಿದ್ದು ದೊಡ್ಡಪ್ಪನೇ ಕೊಲೆಗಾರ ಅಂತ. ಹಾಗಾದ್ರೆ ಅಣ್ಣನೇ ತಮ್ಮನನ್ನ ಕೊಂದು ಮುಗಿಸಿದ್ನಾ? ಯಾಕಾಗಿ ಕೊಲೆ ಮಾಡಿದ? ಆವತ್ತು ಬೋರ್ವೆಲ್ ಪಾಯಿಂಟ್ ಗುರುತಿಸಲು ಹೋದ ನಂತರ ಏನೇನಾಯ್ತು?
ಸಂತೆಬೆನ್ನೂರು: ಆತ ಬೋರ್ವೆಲ್ ಪಾಯಿಂಟ್ ಗುರುತಿಸೋನು. ಆತ ಒಂದು ಪಾಯಿಂಟ್ ಗುರುತು ಮಾಡಿದ್ರೆ ನೀರು ಸಿಗೋದು ಪಕ್ಕಾ. ಹೀಗಾಗಿ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಆತನನ್ನ ಕರೆಸಿ ಬೋರ್ವೆಲ್ ಪಾಯಿಂಟ್ ಪತ್ತೆ ಮಾಡಿಸುತ್ತಿದ್ರು. ಆದ್ರೆ ಆವತ್ತೊಂದು ದಿನ ಇದೇ ಕೆಲಸಕ್ಕೆ ಅಂತ ದೂರದ ಊರಿಗೆ ಹೋಗಿದ್ದ. ಆದ್ರೆ ಎಷ್ಟೇ ಹೊತ್ತಾದ್ರೂ ಮನೆಗೆ ವಾಪಸ್ ಆಗಲಿಲ್ಲ.
ಫೋನ್ ಮಾಡಿದ್ರೆ ಸ್ವಿಚ್ ಆಫ್. ನಾಳೆ ಬರಬಹುದು ಅಂತ ಕುಟುಂಬದವರು ಸುಮ್ಮನ್ನಾಗಿದ್ದಾರೆ. ಆದ್ರೆ ಮರು ದಿನ ಸಿಕ್ಕಿದ್ದು ಅವನ ಡೆಡ್ಬಾಡಿ. ಆತನ ಮೃತದೆಹ ಭದ್ರ ಉಪಕಾಲುವೆಯಲ್ಲಿ ತೇಲಾಡುತ್ತಿತ್ತು. ಇನ್ನೂ ಇದೇ ಕೇಸ್ನ ತನಿಖೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಹಂತಕರನ್ನ ಪತ್ತೆ ಮಾಡಿದ್ರು. ಅಷ್ಟಕ್ಕೂ ಬೋರ್ವೆಲ್ ಪಾಯಿಂಟ್ ಮಾಡಲು ಹೋದವನು ಹೆಣವಾಗಿದ್ದೇಗೆ? ಅವನನ್ನ ಕೊಂದಿದ್ಯಾರು ಅನ್ನೋದೇ ಇವತ್ತಿನ ಎಫ್ ಐ ಆರ್‌ನಲ್ಲಿ ನೋಡಿ