ಧರ್ಮಸ್ಥಳದ ಪವಿತ್ರ ನೇತ್ರಾವತಿ ನದಿ ಅಶುದ್ಧಕ್ಕೆ ಷಡ್ಯಂತ್ರ? ಗೋಹತ್ಯೆ ತಾಜ್ಯ ಎಸೆದ ಕಿಡಿಗೇಡಿಗಳು!

ಪವಿತ್ರ ಕ್ಷೇತ್ರ ಧರ್ಮಸ್ಥಳದ ಪಕ್ಕದಲ್ಲಿ ಹರಿಯುವ ಪವಿತ್ರ ನೇತ್ರಾವದಿ ನದಿ ತೀರ್ಥ ಹಾಗೂ ಪುಣ್ಯಸ್ನಾನದ ಘಟ್ಟವಾಗಿದೆ. ಆದರೆ ಕಿಡಿಗೇಡಿಗಳು ನಡೆ ಮಂಜುನಾಥನ ಭಕ್ತರನ್ನು ಕೆರಳಿಸುವಂತೆ ಮಾಡಿದೆ. 11 ಮೂಟೆಗಳಲ್ಲಿ ನೇತ್ರಾವದಿ ನದಿಗೆ ಗೋ ಹತ್ಯೆ ತಾಜ್ಯಗಳನ್ನು ಎಸೆಯಲಾಗಿದೆ.

First Published Jan 2, 2025, 5:02 PM IST | Last Updated Jan 2, 2025, 5:02 PM IST

ಧರ್ಮಸ್ಥಳ(ಜ.02) ಪ್ರತಿ ದಿನ ಧರ್ಮಸ್ಥಳದ ಮುಂಜನಾಥನ ದರ್ಶನಕ್ಕೆ ಆಗಮಿಸುವವ ಭಕ್ತರು ಪವಿತ್ರ ನದಿ ನೇತ್ರಾವತಿಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಾರೆ. ಆದರೆ ಈ ಪವಿತ್ರ ನೇತ್ರಾವತಿ ನದಿಯನ್ನು ಅಪವಿತ್ರಗೊಳಿಸುವ ಷಡ್ಯಂತ್ರ ನಡೆದಿದೆ. ನೇತ್ರಾವತಿಯ ಉಪನದಿ ಮೃತ್ಯಂಜಯ ನದಿಗೆ ಚಾರ್ಮಿಡಿಯಾ ಅನ್ನಾರು ಬಳಿ 11 ಮೂಟೆಗಳಲ್ಲಿ ಗೋಹತ್ಯೆಯ ತ್ಯಾಜ್ಯಗಳನ್ನು ಎಸೆಯಲಾಗಿದೆ. ಈ ಮೂಲಕ ನದಿಯನ್ನೇ ಅಪವಿತ್ರಗೊಳಿಸಲಾಗಿದೆ. ಧರ್ಮಸ್ಥಳದ ಮಂಜುನಾಥನ ದೇವಸ್ಥಾನಕ್ಕೆ ತೀರ್ಥವನ್ನೂ ಇದೇ ನೇತ್ರಾವತಿ ನದಿಯಿಂದ ತರಲಾಗುತ್ತದೆ.