Asianet Suvarna News Asianet Suvarna News

ಆ್ಯಂಬುಲೆನ್ಸ್‌ಗೆ ದಾರಿ ಬಿಡದೆ ಅಡ್ಡಿಪಡಿಸಿ ವಿಕೃತಿ; ಕಾರು ಸೇರಿ ಚಾಲಕ ಮಂಗಳೂರು ಪೊಲೀಸ್ ವಶಕ್ಕೆ!

ಆ್ಯಂಬುಲೆನ್ಸ್ ಸೇರಿ ತುರ್ತ ಸೇವೆಗೆ ಅಡ್ಡಿಪಡಿಸುವುದು ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಾಗಿದೆ.  ಹೀಗೆ ಆ್ಯಂಬುಲೆನ್ಸ್‌ಗೆ ದಾರಿ ಬಿಡದೆ ಅಡ್ಡಿ ಪಡಿಸಿ ಮಂಗಳೂರಿನ ಕುಂಪಲ ನಿವಾಸಿ ಚರಣ್(31) ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಚರಣ್ ತನ್ನ ಮಾರುತಿ ಎರ್ಟಿಗಾ ಕಾರಿನ ಮೂಲಕ ಆ್ಯಂಬುಲೆನ್ಸ್‌ಗೆ ದಾರಿ ಬಿಡದೆ ಅಡ್ಡಿ ಪಡಿಸಿದ್ದಾನೆ. ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಎಮರ್ಜೆನ್ಸಿಯಾದ ರೋಗಿಯನ್ನು ಕೊಂಡೊಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ. ಕಾರು ಚಾಲಕನ ಪುಂಡಾಟದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ಮಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
 

ಮಂಗಳೂರು(ಜು.20): ಆ್ಯಂಬುಲೆನ್ಸ್ ಸೇರಿ ತುರ್ತ ಸೇವೆಗೆ ಅಡ್ಡಿಪಡಿಸುವುದು ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಾಗಿದೆ.  ಹೀಗೆ ಆ್ಯಂಬುಲೆನ್ಸ್‌ಗೆ ದಾರಿ ಬಿಡದೆ ಅಡ್ಡಿ ಪಡಿಸಿ ಮಂಗಳೂರಿನ ಕುಂಪಲ ನಿವಾಸಿ ಚರಣ್(31) ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಚರಣ್ ತನ್ನ ಮಾರುತಿ ಎರ್ಟಿಗಾ ಕಾರಿನ ಮೂಲಕ ಆ್ಯಂಬುಲೆನ್ಸ್‌ಗೆ ದಾರಿ ಬಿಡದೆ ಅಡ್ಡಿ ಪಡಿಸಿದ್ದಾನೆ. ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಎಮರ್ಜೆನ್ಸಿಯಾದ ರೋಗಿಯನ್ನು ಕೊಂಡೊಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ. ಕಾರು ಚಾಲಕನ ಪುಂಡಾಟದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ಮಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Video Top Stories