Driver Obstructs Ambulance ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಕಾರು ಚಾಲಕ, ತುರ್ತು ಸೇವೆಗೆ ಬರೋಬ್ಬರಿ 30 ಕಿ.ಮೀ ಅಡ್ಡಿ!

ತುರ್ತು ಸೇವೆಗಳಿಗೆ ಅಡ್ಡಿಪಡಿಸುವುದು ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆಯಾಗಿದೆ. ಆದರೂ ಹಲವು ಘಟನೆಗಳು ವರದಿಯಾಗುತ್ತಲೇ ಇದೆ. ಇದೀಗ ಮಂಗಳೂರಿನಲ್ಲಿ ಆ್ಯಂಬುಲೆನ್ಸ್‌ಗೆ ಬರೋಬ್ಬರಿ 30 ಕಿಲೋಮೀಟರ್ ದಾರಿ ಬಿಡ್ಡದೆ ಅಡ್ಡಿಮಾಡಿದ ಘಟನೆ ನಡೆದಿದೆ. 

Share this Video
  • FB
  • Linkdin
  • Whatsapp

ಮಂಗಳೂರು(ಜ.20): ತುರ್ತು ಸೇವೆಗಳಿಗೆ ಅಡ್ಡಿಪಡಿಸುವುದು ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆಯಾಗಿದೆ. ಆದರೂ ಹಲವು ಘಟನೆಗಳು ವರದಿಯಾಗುತ್ತಲೇ ಇದೆ. ಇದೀಗ ಮಂಗಳೂರಿನಲ್ಲಿ ಆ್ಯಂಬುಲೆನ್ಸ್‌ಗೆ ಬರೋಬ್ಬರಿ 30 ಕಿಲೋಮೀಟರ್ ದಾರಿ ಬಿಡ್ಡದೆ ಅಡ್ಡಿಮಾಡಿದ ಘಟನೆ ನಡೆದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಭಟ್ಕಳದ ಆಸ್ಪತ್ರೆಗೆ ರೋಗಿ ಸಾಗಿಸುವ ವೇಳೆ ಘಟನೆ ನಡೆದಿದೆ. ವೆಂಟಿಲೇಟರ್ ಸಹಿತ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಮೂಲ್ಕಿಯಿಂದ ಉಡುಪಿ ತನ 36 ಕಿಲೋಮೀಟರ್ ಆ್ಯಂಬುಲೆನ್ಸ್ ದಾರಿಗೆ ಅಡ್ಡಿ ಮಾಡಲಾಗಿದೆ. ಕಾರು ಚಾಲಕನ ಕಿಡಿಗೇಡಿ ವರ್ತನೆ ಮೊಬೈಲ್ ಕ್ಯಾಮಾರದಲ್ಲಿ ಸೆರೆಯಾಗಿದೆ. ಚಾಲನಕ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Related Video