ಫೇಸ್ಬುಕ್ನಲ್ಲಿ ಲವ್ 4 ವರ್ಷಕ್ಕೆ ಬ್ರೇಕ್ಅಪ್! ಲವ್ವರ್ ಬಿಟ್ಟ ಮೇಲೆ ಆಂಟಿ ಸಹವಾಸ ಮಾಡಿದ್ದ!
ಅವರು ಫೇಸ್ಬುಕ್ ಮೂಲಕ ಪರಿಚಯವಾಗಿ ಲವ್ನಲ್ಲಿ ಬಿದ್ದಿದ್ದರು. ಆದ್ರೆ ನಾಲಕ್ಕೇ ವರ್ಷಕ್ಕೆ ಬ್ರೇಕ್ ಅಪ್ ಆಯ್ತು. ಆಗ ಈ ಪ್ರಣೀತ್ಗೆ ಸಿಕ್ಕಿದ್ದೇ ಆಂಟಿ ಸ್ಮಿತಾ. ಆಕೆಯ ಜೊತೆ ತುಂಬಾ ಕ್ಲೋಸ್ ಆಗಿದ್ದ ಈತ ತನ್ನ ಲವ್ ಬ್ರೇಕ್ಅಪ್ ವಿಷಯವನ್ನ ಹೇಳಿದ್ದ, ಆಮೇಲೆ ಆಗಿದ್ದು ಮಾತ್ರ ದುರಂತ
ಅವಳು ಬೆಳಗಾವಿ ಹುಡುಗಿ, ಆತ ಕಾರವಾರ ಮೂಲದವನು. ಈ ಇಬ್ಬರ ಪರಿಚಯಕ್ಕೆ ಸೇತುವೆ ಆಗಿದ್ದು ಫೇಸ್ಬುಕ್. ಹೀಗೆ ಇಬ್ಬರ ಪರಿಚಯ ಪ್ರೀತಿಗೆ ತಿರುಗುತ್ತೆ. ಬಳಿಕ ಕೆಲ ವರ್ಷಗಳ ಕಾಲ ಈ ಜೋಡಿ ಪ್ರೀತಿ-ಪ್ರೇಮ-ಪ್ರಣಯದಲ್ಲಿ ತೇಲಾಡುತ್ತೆ. ಹೀಗೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ ಮಧ್ಯೆ ಆಗಾಗ ಮನಸ್ತಾಪಗಳೂ ಆಗುತ್ತಿದ್ದವು.
ಈ ಕಾರಣಕ್ಕೆ ಕಳೆದ ವರ್ಷ ಬ್ರೇಕ್ ಅಪ್ ಮಾಡಿಕೊಂಡಿದ್ದ ಈ ಜೋಡಿ ನನ್ನ ಪಾಡಿಗೆ ನಾನಿರುವೆ, ನಿನ್ನ ಪಾಡಿಗೆ ನೀನಿರು ಎಂಬಂತಿದ್ದರು. ಆದ್ರೆ ಸೀನ್ ಕಟ್ ಮಾಡಿದ್ರೆ ಹಳೇ ಲವ್ವರ್ ತನ್ನ ಮಾಜಿ ಪ್ರೇಮಿಗೆ ಗುಂಡು ಹಾರಿಸಿಬಿಟ್ಟಿದ್ದಾಳೆ. ಅಷ್ಟಕ್ಕೂ ಹಳೇ ಪ್ರೆಯಸಿ ಅವನನ್ನ ಕೊಲೆ ಮಾಡಲು ಹೊರಟಿದ್ದೇಕೆ? ಅಂಥಹದ್ದು ಅವರಿಬ್ಬರ ನಡುವೆ ನಡೆದಿದ್ದೇನು ಅನ್ನೋದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ