ಅಪ್ರಾಪ್ತೆ ಮದುವೆ ಮಾಡಿಕೊಡುವಂತೆ ರಂಪಾಟ: ಲಾಂಗ್‌ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ ಭೂಪ

*   ಯುವಕನ ವರ್ತನೆಗೆ ಬೆಚ್ಚಿಬಿದ್ದ ಯುವತಿ ಮನೆಯವರು
*   ಲಾಂಗ್‌ ಹಿಡಿದು ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
*   ಈ ಸಂಬಂಧ ಕೆ.ಆರ್‌. ಪುರಂ ಪೊಲೀಸ್‌ ಠಾಣೆಯಲ್ಲಿ ದೂರು 
 

Share this Video
  • FB
  • Linkdin
  • Whatsapp

ಬೆಂಗಳೂರು(ಫೆ.13): ಅಪ್ರಾಪ್ತೆಯನ್ನ ಮದುವೆ ಮಾಡಿಕೊಡುವಂತೆ ಯುವಕನೊಬ್ಬ ರಂಪಾಟ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವಕನ ವರ್ತನೆಗೆ ಯುವತಿ ಮನೆಯವರು ಬೆಚ್ಚಿಬಿದ್ದಿದ್ದಾರೆ. ಲಾಂಗ್‌ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದಾನೆ. ಲಾಂಗ್‌ ಹಿಡಿದು ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಂಜಾ ಮತ್ತಿನಲ್ಲಿ ಯುವಕ ಕೃತ್ಯವೆಸಗಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ಧ ಕ್ರಮಕ್ಕೆ ಯುವತಿ ಪೋಷಕರು ಆಗ್ರಹಿಸಿದ್ದಾರೆ. ಈ ಸಂಬಂಧ ಕೆ.ಆರ್‌. ಪುರಂ ಪೊಲೀಸ್‌ ಠಾಣೆಯಲ್ಲಿ ಯುವತಿಯ ಮನೆಯವರು ದೂರು ನೀಡಿದ್ದಾರೆ. ದೂರು ನೀಡಿದ್ರೂ ಯುವಕನ ಮೇಲೆ ಪೊಲೀಸರು ಕ್ರಮಕೈಗೊಂಡಿಲ್ಲ ಅಂತ ಯುವತಿಯ ಪೋಷಕರು ಒತ್ತಾಯಿಸಿದ್ದಾರೆ. 

Hijab Row: ನಾಳೆಯಿಂದ ಪ್ರೌಢಶಾಲೆ ಆರಂಭ: ಸಿಎಂ ಬೊಮ್ಮಾಯಿ

Related Video