ಬಳ್ಳಾರಿ: ಪ್ರೇಯಸಿ ಸೇರಿ ಕುಟುಂಬದವರ ಮೇಲೆ ಹಲ್ಲೆ ಬಳಿಕ ಭಗ್ನ ಪ್ರೇಮಿ ಅತ್ಮಹತ್ಯೆ

ಘಟನೆ ಬಳಿಕ ಆರೋಪಿ ಕಾರು ಬಿಟ್ಟು ಹೋಗಿದ್ದ, ಕಾರನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಆದರೆ ಬೆಳಗಿನ ಜಾವ ಆರೋಪಿ ಯಶವಂತ ನಗರ ಬಳಿಯ ರೈಲ್ವೆ ಹಳಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ

First Published Jan 5, 2025, 9:12 AM IST | Last Updated Jan 5, 2025, 9:12 AM IST

ಬಳ್ಳಾರಿ(ಜ.05): ಪ್ರೇಯಸಿ ಸೇರಿ ಕುಟುಂಬದ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಬಳಿಕ ಭಗ್ನ ಪ್ರೇಮಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಡೂರಿನ ಚರ್ಚ್ ಶಾಲೆ ರಸ್ತೆಯಲ್ಲಿ ನಿನ್ನೆ(ಶನಿವಾರ) ನಡೆದಿದೆ. ಯುವತಿ ಮತ್ತವರ ತಾಯಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಯುವತಿ ಅಣ್ಣನಿಗೆ ಬಲವಾಗಿ ಮಚ್ಚಿನೇಟು ಬಿದ್ದಿದೆ. 

ಹೊಸಪೇಟೆ ತಾಲೂಕಿನ ಪಿ.ಕೆ.ಹಳ್ಳಿ ಮೂಲದ ನವೀನಕುಮಾರ್‌ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ.  ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ತೋರಣಗಲ್ಲು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಶವಂತನಗರದ ಗಂಡಿ ಮಲಿಯಮ್ಮ ದೇಗುಲದ ಬಳಿ ಘಟನೆ ನಡೆದಿದೆ. 

HMPV: ಏನಾಗುತ್ತಿದೆ ಚೀನಾದಲ್ಲಿ: ಡ್ರ್ಯಾಗನ್‌ ದೇಶದಿಂದ ಪ್ರತ್ಯಕ್ಷ ವರದಿ

ಘಟನೆ ಬಳಿಕ ಆರೋಪಿ ಕಾರು ಬಿಟ್ಟು ಹೋಗಿದ್ದ, ಕಾರನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಆದರೆ ಬೆಳಗಿನ ಜಾವ ಆರೋಪಿ ಯಶವಂತ ನಗರ ಬಳಿಯ ರೈಲ್ವೆ ಹಳಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ. ಈ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Video Top Stories