Ramanagar : ನಿಧಿಗಾಗಿ ಮಹಿಳೆಯನ್ನು ಬೆತ್ತಲೆಗೊಳಿಸಿ ವಾಮಾಚಾರ

ನಿಧಿ ಆಸೆ​ಗಾಗಿ ಅಮಾ​ಯಕ ಮಹಿ​ಳೆ​ಯನ್ನು ವಿವಸ್ತ್ರಗೊಳಿಸಿ ಪೂಜೆ ನೆರ​ವೇ​ರಿ​ಸಿದ ನಂತರ ಬಲಿ ಕೊಡಲು ತಯಾರಿ ನಡೆ​ಸಿದ್ದ ಆರು ಮಂದಿ ಆರೋ​ಪಿ​ಗ​ಳನ್ನು ಪೊಲೀ​ಸರು ಬಂಧಿ​ಸಿ​ರುವ ಘಟನೆ ಕನ​ಕ​ಪುರ ತಾಲೂಕು ಸಾತನೂರು ಸಮೀ​ಪದ ಭೂಹಳ್ಳಿ ಗ್ರಾಮ​ದಲ್ಲಿ ನಡೆ​ದಿದೆ. 

 

First Published Nov 12, 2021, 10:36 AM IST | Last Updated Nov 12, 2021, 11:59 AM IST

ರಾಮ​ನ​ಗ​ರ (ನ. 12):  ನಿಧಿ ಆಸೆ​ಗಾಗಿ ಅಮಾ​ಯಕ ಮಹಿ​ಳೆ​ಯನ್ನು ವಿವಸ್ತ್ರಗೊಳಿಸಿ ಪೂಜೆ ನೆರ​ವೇ​ರಿ​ಸಿದ ನಂತರ ಬಲಿ ಕೊಡಲು ತಯಾರಿ ನಡೆ​ಸಿದ್ದ ಆರು ಮಂದಿ ಆರೋ​ಪಿ​ಗ​ಳನ್ನು ಪೊಲೀ​ಸರು ಬಂಧಿ​ಸಿ​ರುವ ಘಟನೆ ಕನ​ಕ​ಪುರ (Kanakapura)  ತಾಲೂಕು ಸಾತನೂರು ಸಮೀ​ಪದ ಭೂಹಳ್ಳಿ ಗ್ರಾಮ​ದಲ್ಲಿ ನಡೆ​ದಿದೆ. 

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಹೊತ್ತು ಸಾಗಿದ ಮಹಿಳಾ ಪೊಲೀಸ್, ಮೆಚ್ಚುಗೆಯ ಮಹಾಪೂರ!

ಭೂ ಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರು ವ್ಯವಹಾರದಲ್ಲಿ ಸಾಕಷ್ಟು ನಷ್ಟ ಹೊಂದಿದ್ದರು. ತಮಿಳುನಾಡು ಮೂಲದ ಶಶಿಕುಮಾರ್ ಎಂಬ ಗುರೂಜಿ, ನಿಮ್ಮ ಮನೆಯಲ್ಲಿ ನಿಧಿಯಿದೆ. ಹೀಗಾಗಿ ನಿನಗೆ ನಷ್ಟವಾಗುತ್ತಿದೆ. ಮನೆಯಲ್ಲಿ ಪೂಜೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಗುರೂಜಿ ಶಶಿಕುಮಾರ್ ಸಲಹೆ ಮೇರೆಗೆ ಅಮಾವಾಸ್ಯೆ ದಿನ ಮಹಿಳೆಯನ್ನು ವಿವಸ್ತ್ರಗೊಳಿಸಿ ಪೂಜೆ ಮಾಡಿಸಿದ್ಧಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ತಮಿಳುನಾಡು ಮೂಲದವರಾದ ಪಾರ್ಥ ಸಾರಥಿ, ನಾಗರಾಜು, ಶಶಿಕುಮಾರ್‌, ಲೋಕೇಶ್‌, ಮೋಹನ್‌, ಲಕ್ಷ್ಮಿ ನರಸಪ್ಪ ಎಂಬುವರನ್ನು ಬಂಧಿಸಲಾಗಿದ್ದು, ಪೂಜೆ ನೆಪದಲ್ಲಿ ಬಲಿಯಾಗುತ್ತಿದ್ದ ಕೂಲಿ ಕಾರ್ಮಿಕರಾದ ಸುಜಾತಾ ಎಂಬವರನ್ನು ರಕ್ಷಿಸಲಾಗಿದೆ.

ನಿಧಿಗಾಗಿ ಮಹಿಳೆಯನ್ನು ಬೆತ್ತಲೆಗೊಳಿಸಿ ವಾಮಾಚಾರ

Video Top Stories