Asianet Suvarna News Asianet Suvarna News

ರೇಣುಕಾಸ್ವಾಮಿ ಕೊಲೆ ಕೇಸ್‌: ಹೀರೋ ದರ್ಶನ್ನಾ? ಅರೆಸ್ಟ್ ಮಾಡಿದ ಎಸಿಪಿನಾ? ಯಾರು ನಿಜವಾದ ಹೀರೋ!

ಇಂಥಾ ರಿಯಲ್ ಲೈಫ್ ವಿಲನ್ನನ್ನು ಹಿಡಿದ ಪೋಲೀಸರಲ್ವೆ ನಿಜವಾದ ಹೀರೊ. ಇಂಥಾ ಎಸಿಪಿ ಚಂದನ್ಕುಮಾರ್ಗೆ ಅವರ ಇಂಥಾ ದಕ್ಷ ಪ್ರಾಮಾಣಿಕ ಕೆಲಸಕ್ಕೆ ಸ್ಪೂರ್ತಿಯಾಗಿದ್ದು ಇದೇ ಕನ್ನಡದ ಮತ್ತೊಬ್ಬ ಹೀರೋ ಸಿನಿಮಾ ಅಂದ್ರೆ ನಂಬುತೀರಾ.
 

ದರ್ಶನ್‌ ದೊಡ್ಡ ಸ್ಟಾರ್ ನಟ.. ಮಾಸ್ ಅಭಿಮಾನಿಗಳನ್ನ ಹೊಂದಿದ್ದ ನಟ.. ಹೈಪ್ರೊಫೈಲ್ ನಟ.. ಆದರೂ ಆತ ಒಂದು ಅಮಾನುಷ ಕೃತ್ಯ ಮಾಡಿದ್ದಾನೆ ಅಂತ ಗೊತ್ತಾಗ್ತಿದ್ದ ಹಾಗೆ  ಪ್ರಕರಣದ ಕಂಪ್ಲೀಟ್ ಡೀಟೈಲ್ಸ್ ಪಡೆದು ವೀಡಿಯೋ ಸಾಕ್ಷಿ ಸಮೇತ  ದರ್ಶನ್ ಅಂಡ್ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿದ್ದರು ಎಸಿಪಿ  ಚಂದನ್ ಕುಮಾರ್ ಮತ್ತು ಡಿಸಿಪಿ ಗಿರೀಶ್ . ಪೊಲೀಸರು ಕೊಂಚ ಯಾಮಾರಿದ್ದರೂ ರೇಣುಕಾಸ್ವಾಮಿ ಕೊಲೆಯ ನಿಜವಾದ ಅಪರಾಧಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಯಿತ್ತು. ದೊಡ್ಡ ದೊಡ್ಡ ರಾಜಕಾರಣಿಗಳ ಒತ್ತಡದ ನಡುವೆಯೂ ನಟ ದರ್ಶನ್ ಸೇರಿದಂತೆ 13 ಜನ ಆರೋಪಿಗಳನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದಕ್ಕೆ ಹೇಳಿದ್ದು ನಿಜವಾದ ಹೀರೋ ಯಾರೂ ಅಂತ ನೀವೇ ಹೇಳಿ ಅಂತ  ಸಿನಿಮಾದಲ್ಲಿ ಹೀರೋ ಅನ್ನಿಸಿಕೊಂಡು ಮಾಡಿದ್ದು ಕೊಲೆ ಕೆಲಸ.

ಇಂಥಾ ರಿಯಲ್ ಲೈಫ್ ವಿಲನ್ನನ್ನು ಹಿಡಿದ ಪೋಲೀಸರಲ್ವೆ ನಿಜವಾದ ಹೀರೊ. ಇಂಥಾ ಎಸಿಪಿ ಚಂದನ್ಕುಮಾರ್ಗೆ ಅವರ ಇಂಥಾ ದಕ್ಷ ಪ್ರಾಮಾಣಿಕ ಕೆಲಸಕ್ಕೆ ಸ್ಪೂರ್ತಿಯಾಗಿದ್ದು ಇದೇ ಕನ್ನಡದ ಮತ್ತೊಬ್ಬ ಹೀರೋ ಸಿನಿಮಾ ಅಂದ್ರೆ ನಂಬತೀರಾ. ಹೌದು ಎಸಿಪಿ ಚಂದನ್ ಕುಮಾರ್ ಪುನಿತ್ ರಾಜ್ಕುಮಾರ್ ಅವರ ಪೃಥ್ವಿ ಸಿನಿಮಾದಿಂದ ಪ್ರಭಾವಿತರಾದವರು. ಪ್ರಾಮಾಣಿಕ ಅಧಿಕಾರಿಯಾಗಿ ಹೀಗೆ ಹೆಸರುಮಾಡಬೇಕೆಂದು ಸ್ಪೂರ್ತಿ ಪಡೆದಿದ್ದರು. ಅವತ್ತು ಜೂನ್ 11 ಮಂಗಳವಾರ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಹಾಗೂ ವಿಜಯನಗರದ ಎಸಿಪಿ ಚಂದನ್ ಕುಮಾರ್ ಖಡಕ್ ನಿರ್ಧಾರದಿಂದ ಇಂದು ಪ್ರಕರಣ ತನಿಖೆ ಸರಿಯಾದ ಹಾದಿಯಲ್ಲಿ ಸಾಗಿದೆ. ತಪ್ಪಿತಸ್ಥರು ತಪ್ಪಿಸಿಕೊಳ್ಳದಂತೆ ಸರಿಯಾಗಿ ಬಲೆ ಬೀಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 

ಬೆಳಗ್ಗೆ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಟ ದರ್ಶನ್ನನ್ನು ಎಸಿಪಿ ಚಂದನ್ ವಶಕ್ಕೆ ಪಡೆದಿದ್ದರು. ಪೊಲೀಸರು ಹೋಗಿ ನಮ್ಮೊಟ್ಟಿಗೆ ಬರಬೇಕು ಎಂದಾಗ "ನಾನ್ ಬರ್ತೀನಿ ನೀವು ನಡೀರಿ. ನಿಮ್ಮ ಜೊತೆ ಬಂದರೆ ಜನ ತಪ್ಪು ತಿಳಿದುಕೊಳ್ತಾರೆ. ನನ್ನ ಕಾರಿನಲ್ಲಿ ಬರುತ್ತೇನೆ" ಎಂದು ಹೇಳಿದ್ದರಂತೆ. ಆಗ ಎಸಿಪಿ ಚಂದನ್ ಕುಮಾರ್, ನೀನ್ಯಾರು? ನಿನ್ ಕಥೆ ಏನು ಗೊತ್ತು, ಜೀಪ್ ಹತ್ತು ಅಂದಿದ್ದಾರೆ. ಅಷ್ಟಕ್ಕೆ ಥಂಡಾ ಹೊಡೆದ ದರ್ಶನ್ ಜೀಪ್ ಹತ್ತಿ ಬಂದಿದ್ದಾರೆ. ಇಷ್ಟು ಧೈರ್ಯವಾಘಿ ದರ್ಶನ್ರನ್ನು ಅರೆಸ್ಟ್ ಮಾಡಬೇಕು ಅಂದ್ರೆ ನಿಜವಾಗಿಯೂ ಚಂದನ್ ಮತ್ತು ಗಿರೀಶ್ ಅವರಿಗೆ ಹ್ಯಾಟ್ಸಾಪ್ ಹೇಳಲೇಬೇಕು. ಮೈಸೂರಿನಲ್ಲಿ ಓದಿ ಬೆಳೆದವರು ಎಸಿಪಿ ಚಂದನ್ ಕುಮಾರ್. ಅಂದಹಾಗೆ ದರ್ಶನ್ ಹಾಗೂ ಚಂದನ್ ಇಬ್ಬರೂ ಮೈಸೂರಿನ ಇಟ್ಟಿಗೆಗೂಡು ಭಾಗದವರು. ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಹೈಸ್ಕೂಲ್, ಪಿಯುಸಿ ಓದಿದ್ದರು. 

ಬಳಿಕ ಡಿಪ್ಲೊಮೊ ಮಾಡಿ ಬಳಿಕ ಇಂಜಿನಿಯರಿಂಗ್ ಮಾಡಿದವರು. 2 ವರ್ಷ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿ ಬಂದವರು. ನಂತರ ಕೆಪಿಎಸ್ ಸಿ ಪರೀಕ್ಷೆ ಬರೆದು ನಾಲ್ಕನೇ ರ್ಯಾಂಕ್ ಪಡೆದು ಡಿವೈಎಸ್ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಡಾ. ರಾಜ್ಕುಮಾರ್ ಐಎಎಸ್, ಕೆಎಎಸ್ ಅಕಾಡೆಮಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಸಿಪಿ ಚಂದನ್ ಕುಮಾರ್ ಮಾತನಾಡಿದ್ದ ಮಾತುಗಳು ಈಗ ವೈರಲ್ ಆಗುತ್ತಿದೆ. ಅದರಲ್ಲಿ ತಮ್ಮ ನೆಚ್ಚಿನ ಹವ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ನೋಡುವುದು ಅಂದ್ರೆ ಬಹಳ ಇಷ್ಟ ಎಂದಿದ್ದಾರೆ. "ಸಿಂಗಂ ಸಿನಿಮಾ ನೋಡಿ ಪೊಲೀಸ್ ಆಗಲು ಬಂದರೆ ಸಾಧ್ಯವಿಲ್ಲ. ಅದು ಬರೀ ಸಿನಿಮಾ ಅಷ್ಟೆ. ಆದರೆ ಆ ಸಿನಿಮಾ ನೋಡಿದಾಗ ಅದ್ಭುತ ಅನುಭವ ಆಗುತ್ತದೆ ಅಷ್ಟೆ" ಎಂದಿದ್ದರು. ಅಪ್ಪು ಸರ್ದು ಒಂದು ಒಳ್ಳೆ ಸಿನಿಮಾ 'ಪೃಥ್ವಿ' ಇದೆ. 

ಅದು ಒಳ್ಳೆ ಸ್ಫೂರ್ತಿದಾಯಕವಾದ ಸಿನಿಮಾ. ಅಪ್ಪು ಸರ್ ರೀತಿ ನಾವು ಐಎಎಸ್ ಆಗೋಣ, ಒಳ್ಳೆ ಕೆಲಸ ಮಾಡೋಣ. 'ಪೃಥ್ವಿ' ಸಿನಿಮಾ ಬಹಳ ಪ್ರಾಕ್ಟಿಕಲ್ ಆಗಿದೆ. ಏನೆಲ್ಲಾ ನಡೆಯುತ್ತದೆ ಎನ್ನುವುದನ್ನು ನೈಜವಾಗಿ ತೋರಿಸಿದ್ದಾರೆ. ಆ ಸಿನಿಮಾ ಪದೇ ಪದೇ ರಿಪೀಟ್ ಮಾಡಿ ನೋಡ್ತೀನಿ" ಎಂದು ಎಸಿಪಿ ಚಂದನ್ ಕುಮಾರ್ ಹೇಳಿದ್ದಾರೆ. ಒಟ್ಟಿನಲ್ಲಿ ಒಳ್ಳೆಯ ಗುಣ ವ್ಯಕ್ತಿತ್ವ ನಾವು ರೂಡಿಸಿಕೊಳ್ಳುವುದರಲ್ಲಿರುತ್ತದೆ.. ಯಾವುದೂ ತಾನಾಗೆ ಬರುವುದಿಲ್ಲ, ನಮ್ಮ ಸಂಘ ಸಹವಾಸ ಎಲ್ಲವೂ ಅದನ್ನು ಕಲಿಸುತ್ತದೆ ಎನ್ನುವುದಕ್ಕೆ ಇವರೆ ಉದಾಹರಣೆ. ನಾಳ್ಕು ಜನ ನಮ್ಮ ನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಾರೆಂದರೆ ಅದು ಒಳ್ಳೆಯ ಕಾರಣದಿಂದಾಗಿರಬೇಕು. ಕೆಟ್ಟ ನಡವಳಿಕೆಗೆ ದರ್ಶನ್ರಂತೆ ಮಾದರಿಯಾಗಬಾರದು.

Video Top Stories