ಹೊರ ರಾಜ್ಯದಿಂದ ಬಂದು ಬಾಂಬ್ ಇಟ್ಟನಾ ಆರೋಪಿ..? FSLನಲ್ಲಿ ಬರಲಿದೆಯಾ ಅಚ್ಚರಿಗೊಳಿಸುವ ವರದಿ..?

ಆರೋಪಿ ಪತ್ತೆಗೆ ಪೊಲೀಸರು ಮಾಡಿರುವ ಪ್ಲಾನ್ ಏನು..?
ಅದೊಂದು ಕ್ಲೂಗಾಗಿ ಕಾಯ್ತಿದೆ ಬೇಟೆಗಾರರ ಸೈನ್ಯ..!
ಕೃತ್ಯವೆಸಗಿದ ಆರೋಪಿ ಸ್ವಂತ ವಾಹನ ಬಳಕೆ ಮಾಡಿಲ್ಲ
ಕೃತ್ಯ ಸಂದರ್ಭದಲ್ಲಿ ಆರೋಪಿ ಮೊಬೈಲ್ ಬಳಕೆ ಮಾಡಿಲ್ಲ

First Published Mar 3, 2024, 3:05 PM IST | Last Updated Mar 3, 2024, 3:17 PM IST

ಬೆಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್‌ಗೆ ಸಿಲಿಕಾನ್‌ ಸಿಟಿಯೇ ಬೆಚ್ ಬಿದ್ದಿದೆ. ಈ ಕೃತ್ಯ ಎಸಗಿದವರು ಯಾರು? ಈ ಕೃತ್ಯ ಹಿಂದಿನ ಉದ್ದೇಶವೇನು? ಯಾವ ಕಾರಣಕ್ಕಾಗಿ ರಾಮೇಶ್ವರಂ ಕೆಫೆಯನ್ನೇ(Rameshwaram Cafe) ಆಯ್ಕೆ ಮಾಡಿಕೊಳ್ಳಲಾಯ್ತು ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಎಲ್ಲ ಗೊಂದಲಗಳ ನಡುವೆಯೇ ಬೆಂಗಳೂರು ಪೊಲೀಸರು(Police) ಕೃತ್ಯ ಎಸಗಿದವರ ಪತ್ತೆಗೆ ಬಲೆ ಬೀಸಿದೆ. ಆದ್ರೆ, ಬಾಂಬ್ ಬ್ಲಾಸ್ಟ್ ಮಾಡಿದವನ ಪತ್ತೆ ಇನ್ನೂ ಆಗಿಲ್ಲ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್(Bomb Blast) ನಡೆದಿದೆ.ಈ ಬ್ಲಾಸ್ಟ್‌ನಲ್ಲಿ 9 ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಈ ಬಾಂಬ್ ಬ್ಲಾಸ್ಟ್‌ನಿಂದಾಗಿ ಯಾವುದೇ ಸಾವು ಸಂಭಿವಿಸಿಲ್ಲ. ಬೆಂಗಳೂರು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಈತನ ಪತ್ತೆಗೆ ನಿಂತ ಬೆಂಗಳೂರು ಪೊಲೀಸರಿಗೆ ಅನೇಕ ಸವಾಲುಗಳು ಎದುರಾಗುತ್ತಿವೆ. ಎದುರಾದ ಸವಾಲುಗಳನ್ನೆಲ್ಲ ಬೇಧಿಸಿ ಪೊಲೀಸ್ ತನಿಖಾ ಪಡೆ ಮುನ್ನುಗ್ಗುತ್ತಿದೆ. 

ಇದನ್ನೂ ವೀಕ್ಷಿಸಿ:  ಬ್ಲಾಸ್ಟ್ ಕೇಸ್ ಬಗ್ಗೆ ಕೆಲ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ: ಗೃಹ ಸಚಿವ ಪರಮೇಶ್ವರ್