ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ

ಕೋಲ್ಕತ್ತಾದಲ್ಲಿ ನಡೆದ ಡಾಕ್ಟರ್ ರೇಪ್ & ಮರ್ಡರ್ ಕೇಸಿನಲ್ಲಿ, ದೇಶಾದ್ಯಂತ ಇರೋ ವೈದ್ಯರೆಲ್ಲ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದು ಈ ಕಾರಣಕ್ಕೆ. ಸುಪ್ರೀಂಕೋರ್ಟ್ ಉಗಿದಿರೋದೂ ಕೂಡಾ ಅದಕ್ಕೇ. ಸರ್ಕಾರದ ಒಂದು ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದ್ಯೇನೋ ಅನ್ನಿಸೋಕೆ ಕಾರಣ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. 

Share this Video
  • FB
  • Linkdin
  • Whatsapp

ಕೋಲ್ಕತ್ತಾ(ಆ.21): ಒಬ್ಬ ಹೆಣ್ಣು ಮಗಳು, ಇಂಡಿಪೆಂಡೆಂಟ್ ಆಗಿ ಡಾಕ್ಟರ್ ಆಗಿ ಕೆಲಸ ಮಾಡಬೇಕಿದ್ದ ಟ್ರೈನಿ ಡಾಕ್ಟರ್ ಒಬ್ಬರು, ತಾನು ಕೆಲಸ ಮಾಡ್ತಿದ್ದ ಆಸ್ಪತ್ರೆಯಲ್ಲೇ ರೇಪ್ ಆಗ್ತಾರೆ. ಬರ್ಬರವಾಗಿ ಕೊಲೆಯಾಗ್ತಾರೆ. ಆ ರೇಪ್ & ಮರ್ಡರ್‌ಅನ್ನು ಮುಚ್ಚಿ ಹಾಕೋಕೆ ಒಂದಿಡೀ ಸಿಸ್ಟಂ ಇನ್ನಿಲ್ಲದ ಪ್ರಯತ್ನ ಮಾಡುತ್ತೆ. ಆದರೆ ಆ ಕೇಸ್, ಇಡೀ ದೇಶವನ್ನ ಒಂದುಗೂಡಿಸುತ್ತೆ. ಸುಪ್ರೀಂಕೋರ್ಟ್‌ ಈಗ ರಾಜ್ಯ ಸರ್ಕಾರಕ್ಕೆ ಉಗಿದು ಉಪ್ಪಿನಕಾಯಿ ಹಾಕಿದೆ. ಅದೇ ಈ ಹೊತ್ತಿನ ವಿಶೇಷ ಜಸ್ಟೀಸ್ ಫಾರ್ ಅಭಯಾ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೀವ ಉಳಿಸಬೇಕಾದ ಡಾಕ್ಟರ್‌ಗೆ, ತಾನು ಕೆಲಸ ಮಾಡೋ ಆಸ್ಪತ್ರೆಯಲ್ಲೇ ರಕ್ಷಣೆ ಇಲ್ಲ ಅಂತಾದ್ರೆ.. ಡಾಕ್ಟರ್ಸ್ ಇನ್ ಡೇಂಜರ್ ಅಂತಾ ಭಯ ಹುಟ್ಟಲ್ವಾ..? ಕೋಲ್ಕತ್ತಾದಲ್ಲಿ ನಡೆದ ಡಾಕ್ಟರ್ ರೇಪ್ & ಮರ್ಡರ್ ಕೇಸಿನಲ್ಲಿ, ದೇಶಾದ್ಯಂತ ಇರೋ ವೈದ್ಯರೆಲ್ಲ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದು ಈ ಕಾರಣಕ್ಕೆ. ಸುಪ್ರೀಂಕೋರ್ಟ್ ಉಗಿದಿರೋದೂ ಕೂಡಾ ಅದಕ್ಕೇ. ಸರ್ಕಾರದ ಒಂದು ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದ್ಯೇನೋ ಅನ್ನಿಸೋಕೆ ಕಾರಣ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. 

ಡ್ರಾಪ್​​ ಕೇಳಿದವಳ ಮೇಲೆಯೇ ಎರಗಿಬಿಟ್ಟ ಪಾಪಿ! ಅವಳ ಮಾನ, ಪ್ರಾಣ ಉಳಿಸಿದ್ದು ಪ್ಯಾನಿಕ್​​ ಬಟನ್​..!

ದೇಶದಲ್ಲಿ ಶಿಕ್ಷೆ ಕೊಡೋಕೆ ಒಂದು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ ಅನ್ನೋದರ ಬಗ್ಗೆ ನಮಗೆಲ್ಲ ಒಂದು ಕಲ್ಪನೆ ಇದೆ. ಆದರೆ, ಅದೇ ವ್ಯವಸ್ಥೆ, ಶಿಕ್ಷೆ ಕೊಡಿಸೋದಿರ್ಲಿ, ಅಪರಾಧಿಗಳನ್ನ ರಕ್ಷಣೆ ಮಾಡೋಕೆ ನಿಂತ್ರೆ ಹೇಗಿರುತ್ತೆ ಅನ್ನೋದನ್ನ ಅರ್ಥ ಮಾಡ್ಕೋಬೇಕು ಅಂದ್ರೆ, ಕೋಲ್ಕತ್ತಾದಲ್ಲಿ ನಡೆದ ಈ ಡಾಕ್ಟರ್ ರೇಪ್ & ಮರ್ಡರ್ ಕೇಸ್ನ ಇನ್ವೆಸ್ಟಿಗೇಷನ್ ನೋಡ್ಬೇಕು.

ನ್ಯಾಯ ಕೊಡಿಸಬೇಕಾದವರೇ, ನ್ಯಾಯಕ್ಕೆ ನೇಣು ಹಾಕೋಕೆ ಹೋದಂತಾಗಿದೆ. ಈಗ ಆ ಹೆಣ್ಣು ಮಗಳ ಅಪ್ಪ ಏನ್ ಮಾಡ್ಬೇಕು. ಮಗಳು ಡಾಕ್ಟರ್ ಆಗ್ಬೇಕಂತೆ ಕನಸು ಕಂಡಿದ್ದ ಅಪ್ಪ, ಪ್ರಕರಣ ಕೇಳಿದ್ರೆ ಸಾಕು, ಕಣ್ಣೀರಾಗ್ತಾರೆ. ಮಗಳ ಸಾವಿಗೆ ನ್ಯಾಯ ಕೊಡ್ಸಿ ಅನ್ನೋ ಆ ತಂದೆ ತಾಯಿ, ದೇಶದ ಇನ್ನೊಬ್ಬ ಹೆಣ್ಣು ಮಗಳಿಗೆ ಇಂತಾ ಅನ್ಯಾಯ ಆಗ್ಬಾರ್ದು ಅಂತಾರೆ. ನ್ಯಾಯ ಸಿಗುತ್ತಾ..? ಅದು ನಮ್ಮ ಪ್ರಶ್ನೆಯೂ ಹೌದು. ಏನೇ ಹೋರಾಟ ಮಾಡಿದ್ರೂ.. ನಾವು ಅದೇ ವ್ಯವಸ್ಥೆಯ ಒಳಗೇ ಮಾಡ್ಬೇಕಲ್ವಾ?. 

Related Video