ವಿಜಯಪುರ ಚಡಚಣದಲ್ಲಿ ಮಾವಾ ದಂಧೆ, ಕ್ಯಾನ್ಸರ್‌ಗಿಂತಲೂ ಮಾರಕ ರೋಗಕ್ಕೆ ಜನ ತುತ್ತು!

ಅಕ್ರಮ ಮರಳು ದಂಧೆ, ಪಿಸ್ತೂಲ್ ದಂಧೆ ಆಯ್ತು ಈಗ ಭೀಮಾತೀರ (Bhimateera) ಚಡಚಣದಲ್ಲಿ (Chadachana) ಮಾವಾ ದಂಧೆಯ (Mava Deal) ಸದ್ದು ಕೇಳಿ ಬರುತ್ತಿದೆ. ಇಲ್ಲಿ ತಯಾರಾಗುವ ಮಾವಾ ಪಾನ್ ಮಸಾಲ ಅಂಗಡಿಗಳ ಮೂಲಕ ರವಾನೆಯಾಗುತ್ತದೆ.

Share this Video
  • FB
  • Linkdin
  • Whatsapp

ವಿಜಯಪುರ (ಜೂ. 13): ಅಕ್ರಮ ಮರಳು ದಂಧೆ, ಪಿಸ್ತೂಲ್ ದಂಧೆ ಆಯ್ತು ಈಗ ಭೀಮಾತೀರ (Bhimateera) ಚಡಚಣದಲ್ಲಿ (Chadachana) ಮಾವಾ ದಂಧೆಯ (Mava Deal) ಸದ್ದು ಕೇಳಿ ಬರುತ್ತಿದೆ. ಇಲ್ಲಿ ತಯಾರಾಗುವ ಮಾವಾ ಪಾನ್ ಮಸಾಲ ಅಂಗಡಿಗಳ ಮೂಲಕ ರವಾನೆಯಾಗುತ್ತದೆ.

Excluve: ಭೀಮಾತೀರದ ಇನ್ನೊಂದು ಕರಾಳ ಮುಖ, ಎಗ್ಗಿಲ್ಲದೇ ನಡೆಯುತ್ತಿದೆ 'ಮಾವಾ' ದಂಧೆ...!

ಚಡವಣದಿಂದ ಮಹಾರಾಷ್ಟ್ರದವರೆಗೂ ಈ ದಂಧೆ ಹಬ್ಬಿದೆ. ಒಂದು ಪ್ಯಾಕೆಟ್‌ಗೆ 50 ರೂನಮತೆ ಪಾನ್ ಅಂಗಡಿಗಳಲ್ಲಿ ಮಾರಾಟವಾಗುತ್ತದೆ. ಮಾವಾ ಅಂದ್ರೆ ಕಚ್ಚಾ ಮಾದಕ ವಸ್ತು. ಇದಕ್ಕೆ ಅಡಿಕೆ ಪುಡಿ, ಸುಣ್ಣ, ಗಾಂಜಾ ನೀರು, ತೀನ್ ಸೌ ತಂಬಾಕು ಹಾಕಿ ತಯಾರು ಮಾಡಲಾಗುತ್ತದೆ. ಇದನ್ನು ಸೇವಿಸುವುದರಿಂದ ಜೀವಕ್ಕೆ ಹಾನಿ ಉಂಟು ಮಾಡುತ್ತದೆ. ಮಾವಾ ತಯಾರಿಕೆಯ ಎಕ್ಸ್‌ಕ್ಲೂಸಿವ್ ದೃಶ್ಯಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

Related Video