ಆಂಟಿ ಮೇಲೆ ಆಸೆ, ಅಂಟಿ ಮಗಳ ಮೇಲೆ ಲವ್! ಅಡ್ಡ ಇದ್ದ ರಿಯಲ್ ಎಸ್ಟೇಟ್ ಅಂಕಲ್ ಖತಂ
ಒಂದೇ ಒಂದು ಸುಳಿವಿರಲಿಲ್ಲ ಆದ್ರೂ ಪೊಲೀಸರು 24 ಗಂಟೆಗಳಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ರು. ಅಷ್ಟಕ್ಕೂ ಈ ಕಿರಾತಕರು ಅಮಾಯಕ ಗಿರೀಶನನ್ನ ಕೊಂದಿದ್ದಾದ್ರೂ ಯಾಕೆ? ಆತನಿಂದ ಇವರಿಗೆ ಆದ ನಷ್ಟವಾದ್ರು ಏನು ಅಂತ ವಿಚಾರಿಸಿದಾಗ ಅಲ್ಲಿ ಬಂದಿದ್ದು ಗಿರೀಶನ ಹೆಂಡತಿ ದೀಪಾ ಮ್ಯಾಟರ್
ಅದೊಂದು ಪುಟ್ಟ ಸಂಸಾರ. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಗಂಡ ರಿಯಲ್ ಎಸ್ಟೇಟ್ ಉದ್ಯಮಿಯಾದ್ರೆ ಹೆಂಡತಿ ಟೀಚರ್. ಮಕ್ಕಳು ಶಾಲೆಗೆ ಹೋಗ್ತಿದ್ವು. ಎಲ್ಲವೂ ಚೆನ್ನಾಗಿತ್ತು. ದುಡ್ಡು ಕಾಸಿಗೇನೂ ತೊಂದರೆ ಇರಲಿಲ್ಲ. ಆದ್ರೆ ಆವತ್ತೊಂದು ದಿನ. ಗಂಡ ಮನೆಯಲ್ಲಿ ಮಲಗಿದ್ದ ಹೆಂಡತಿ ಮಕ್ಕಳು ಶಾಲೆಗೆ ಹೋಗಿದ್ರು. ಇದೇ ಟೈಂನಲ್ಲಿ ಯಾರೋ ಹಂತಕರು ಬಂದು ಆತನನ್ನ ಬರ್ಬರವಾಗಿ ಕೊಂದು ಮುಗಿಸಿದ್ರು.
ಇನ್ನೂ ತನಿಖೇ ನಡೆಸಿದ ಪೊಲೀಸರಿಗೆ ಒಂದೇ ಒಂದು ಸುಳಿವು ಸಿಕ್ಕಿರಲಿಲ್ಲ. ಆದ್ರೆ ಹೆಂಡತಿಯೇ ಕೊಟ್ಟ ಒಂದು ಮಾಹಿತಿ ಕೇಸ್ಗೆ ಮೇಜರ್ ಟ್ವಿಸ್ಟ್ ಸಿಕ್ಕಿತ್ತು. ಅಷ್ಟಕ್ಕೂ ಆತನನ್ನ ಕೊಂದಿದ್ಯಾರು? ಯಾಕಾಗಿ ಕೊಂದ್ರು. ಹೆಂಡತಿ ಕೊಟ್ಟ ಆ ಸುಳಿವಾದ್ರೂ ಏನು? ಒಂದು ಡೆಡ್ಲಿ ಮರ್ಡರ್ ಹಿಂದಿನ ರೋಚಕ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್.