ಇಂದು ನನ್ನ ಗಂಡ ನಾಳೆ ಇತರರು, ಹಿಂದೂ ಸಮಾಜಕ್ಕೆ ಕನ್ಹಯ್ಯಾ ಪತ್ನಿ ಎಚ್ಚರಿಕೆ!
- ನೂಪುರ್ ಶರ್ಮಾ ಫೋಟೋ ಸ್ಟೇಟಸ್ ಹಾಕಿದ್ದಕ್ಕೆ ಕೊಲೆ
- ಹಿಂದೂ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಮಾಡಿದ ಮುಸ್ಲಿಮ್ ಯುವಕರು
- ಪ್ರಧಾನಿ ಮೋದಿಗೆ ಬೆದರಿಕೆ ಹಾಕಿ ವಿಡಿಯೋ ಸಂದೇಶ
ಉದಯಪುರದಲ್ಲಿ ನಡೆದ ಹಿಂದೂ ವ್ಯಕ್ತಿಯ ಭೀಕರ ಹತ್ಯೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಆದರೆ ಗಂಡನ ಕಳೆದುಕೊಂಡ ಕನ್ಹಯ್ಯ ಪತ್ನಿ ಆಕ್ರಂದನ ಮುಗಿಲು ಬಿಟ್ಟಿದ್ದಾರೆ. ಗಂಡನ ಕೊಂದವರನ್ನು ಬಿಡಬೇಡಿ, ಅವರನ್ನು ಗಲ್ಲಿಗೇರಿಸಿ ಎಂದು ಕನ್ಹಯ್ಯ ಪತ್ನಿ ನೋವಿನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇಂದು ನನ್ನ ಗಂಡನ ಕೊಂದಿದ್ದಾರೆ. ನಾಳೆ ಇತರರನ್ನು ಕೊಲ್ಲುತ್ತಾರೆ. ಇಂತಹ ಮುಸ್ಲಿಮ್ ಪಾತಕಿಗಳಿಂದ ನಾವು ಅನಾಥರಾಗಿದ್ದೇವೆ ಎಂದು ಕನ್ಹಯ್ಯ ಲಾಲ್ ಪತ್ನಿ ಕಣ್ಣೀರಿಟ್ಟಿದ್ದಾರೆ.