Raichur: ಜಮೀನು ಖರೀದಿ ವಿಚಾರಕ್ಕೆ ಕಿರಿಕ್: 2 ಗುಂಪುಗಳ ಮಧ್ಯೆ ಹೊಡೆದಾಟ..!
* ರಾಯಚೂರು ಜಿಲ್ಲೆಯ ಜಿಲ್ಲೆಯ ಸಿಂಧನೂರು ತಾಲೂಕಿನ ವಿರುಪಾಪುರದಲ್ಲಿ ನಡೆದ ಘಟನೆ
* ರಾಡು, ಕಟ್ಟಿಗೆಯಿಂದ ಎರಡು ಗುಂಪುಗಳ ನಡುವೆ ಗಲಾಟೆ
* ಕೊಟ್ಟ ಹಣ ವಾಪಸ್ ನೀಡಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ
ರಾಯಚೂರು(ಫೆ.13): ಜಮೀನು ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ವಿರುಪಾಪುರದಲ್ಲಿ ಇಂದು(ಭಾನುವಾರ) ನಡೆದಿದೆ. ರಾಡು, ಕಟ್ಟಿಗೆಯಿಂದ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಶರಣಪ್ಪ, ನಿರುಪಾದಿ ಕುಟುಂಬದ ನಡುವೆ ಹೊಡೆದಾಟ ನಡೆದಿದೆ. ಕೊಟ್ಟ ಹಣ ವಾಪಸ್ ನೀಡಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ. ಗಲಾಟೆಯಲ್ಲಿ ಗೋವಿಂದಪ್ಪ, ಶಿವರಾಜ್, ಅಂಬರೀಶ್‌ಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Hijab Row: ಹಿಜಾಬ್ ವಿವಾದಕ್ಕೆ ಮೋದಿ ಸರ್ಕಾರದ ಏಕರೂಪ ನಾಗರಿಕ ಸಂಹಿತೆ ಮದ್ದು?