
ಟ್ರಾನ್ಸ್‌ಫಾರ್ಮರ್ ಸ್ಫೋಟಕ್ಕೆ ತಂದೆ-ಮಗಳು ಬಲಿ, ಹಸೆಮಣೆ ಏರಬೇಕಾದ ಯುವತಿ ಮಸಣಕ್ಕೆ
ಟ್ರಾನ್ಸ್‌ಫಾರ್ಮರ್ ಸ್ಫೋಟಕ್ಕೆ ತಂದೆ-ಮಗಳು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಉಲ್ಲಾಳ ಬಳಿ ನಡೆದಿದೆ.
ಬೆಂಗಳೂರು, (ಮಾ.24): ಟ್ರಾನ್ಸ್‌ಫಾರ್ಮರ್ ಸ್ಫೋಟಕ್ಕೆ ತಂದೆ-ಮಗಳು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಉಲ್ಲಾಳ ಬಳಿ ನಡೆದಿದೆ.
Transformer Explodes: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಫೋಟಕ್ಕೆ ತಂದೆ ಬಲಿ!
ಮಂಗನಹಳ್ಳಿ ಬ್ರಿಡ್ಜ್ ಬಳಿ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡಿದ್ದ ತಂದೆ ಶಿವರಾಜ್ ಹಾಗೂ ಪುತ್ರಿ ಚೈತನ್ಯಾಗೆ (19) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ನಿನ್ನೆಯೇ (ಬುಧವಾರ) ಶಿವರಾಜ್ (55) ಮೃತಪಟ್ಟಿದ್ದರು.