1 ಲಕ್ಷ ಅಸಲಿ ಹಣ ನೀಡಿದ್ರೆ 5 ಲಕ್ಷ ನಕಲಿ ಹಣ ಸಿಗುತ್ತೆ: ದೇಶದಲ್ಲಿ ಮತ್ತೆ ವ್ಯಾಪಿಸಿದ ಖೋಟಾ ನೋಟು ಜಾಲ
ಖೋಟಾ ನೋಟು ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಬಿಡುತ್ತೆ. ನಕಲಿ ನೋಟುಗಳ ಬಳಕೆಯನ್ನ ತಡೆಗಟ್ಟಲು 2016 ನವೆಂಬರ್ 8ರಂದು ಕೇಂದ್ರ ಸರ್ಕಾರ ಹಳೆಯ 500, 1000 ನೋಟುಗಳನ್ನ ಅಮಾನ್ಯೀಕರಣ ಮಾಡಿತ್ತು. ನೋಟು ರದ್ದತಿ ಬಳಿಕ ನಿಯಂತ್ರಣಕ್ಕೆ ಬಂದಿದ್ದ ಖೋಟಾ ನೋಟು ಜಾಲ ಮತ್ತೆ ಚಿಗುರೊಡೆಯುತ್ತಿದೆ. ದೇಶದ ಮೂಲೆ ಮೂಲೆಗೂ ಫೇಕ್ ಕರೆನ್ಸಿ ಜಾಲ ವಿಸ್ತರಿಸಿಕೊಳ್ಳುತ್ತಿದೆ.
ವಿಜಯಪುರ(ಜ.11): ಇದು ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಖದೀಮರ ಸ್ಟೋರಿ. ದೇಶದಲ್ಲಿ ಕೆಲ ವರ್ಷಗಳಿಂದ ಸೈಲೆಂಟ್ ಆಗಿದ್ದ ಖೋಟಾ ನೋಟು ದಂಧೆಕೋರರು ಮತ್ತೆ ಆಕ್ಟೀವ್ ಆಗಿದ್ದಾರೆ. ಈ ಕರಾಳ ದಂಧೆಯ ಇಂಚಿಂಚೂ ಮಾಹಿತಿಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲಿಗೆಳೆದಿದೆ.
ಖೋಟಾ ನೋಟು ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಬಿಡುತ್ತೆ. ನಕಲಿ ನೋಟುಗಳ ಬಳಕೆಯನ್ನ ತಡೆಗಟ್ಟಲು 2016 ನವೆಂಬರ್ 8ರಂದು ಕೇಂದ್ರ ಸರ್ಕಾರ ಹಳೆಯ 500, 1000 ನೋಟುಗಳನ್ನ ಅಮಾನ್ಯೀಕರಣ ಮಾಡಿತ್ತು. ನೋಟು ರದ್ದತಿ ಬಳಿಕ ನಿಯಂತ್ರಣಕ್ಕೆ ಬಂದಿದ್ದ ಖೋಟಾ ನೋಟು ಜಾಲ ಮತ್ತೆ ಚಿಗುರೊಡೆಯುತ್ತಿದೆ. ದೇಶದ ಮೂಲೆ ಮೂಲೆಗೂ ಫೇಕ್ ಕರೆನ್ಸಿ ಜಾಲ ವಿಸ್ತರಿಸಿಕೊಳ್ಳುತ್ತಿದೆ. ನಕಲಿ ವೀರರ ಕರಾಳ ದಂಧೆಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ದಾಖಲೆ ಸಮೇತ ಎಕ್ಸ್ಪೋಸ್ ಮಾಡಿದೆ.
Deadly Danger: ಪಾನಿಪುರಿ ಅಂಗಡಿಗೆ ನುಗ್ಗಿದ ಕಾರು! ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದವರು ಜಸ್ಟ್ ಮಿಸ್!
ಖೋಟಾ ನೋಟಿಗೆ ಒನ್ ಪ್ಲಸ್ ಕರೆನ್ಸಿ, ಸೆಕೆಂಡ್ ಕರೆನ್ಸಿ ಎಂದು ಹೆಸರಿಡಲಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮೂಲದ ಖದೀಮರು ಈ ದಂಧೆಯಲ್ಲಿ ತೊಡಗಿಕೊಂಡಿದ್ದು, ಅಲ್ಲಿಂದಲೇ ನಮ್ಮ ರಾಜ್ಯಕ್ಕೂ ನಕಲಿ ನೋಟುಗಳ ಸಪ್ಲೈ ಆಗ್ತಿದೆ. ನಕಲಿ ನೋಟು ದಂಧೆ ಬೆನ್ನಟ್ಟಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಖದೀಮರ ಅಸಲಿಯತ್ತನ್ನ ಬಯಲು ಮಾಡಿದೆ. ಫೇಕ್ ಕರೆನ್ಸಿ ಮಾಫಿಯಾವನ್ನ ಎಕ್ಸಪೋಸ್ ಮಾಡಲು ನಮ್ಮ ವಿಜಯಪುರ ಪ್ರತಿನಿಧಿ ಷಡಕ್ಷರಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ದಂಧೆಕೋರರನ್ನ ಸಂಪರ್ಕಿಸಿದಾಗ ಭಯಾನಕ ಸಂಗತಿಗಳು ಹೊರಬಿದ್ದಿವೆ. ವಿಡಿಯೋ ಕಾಲ್ನಲ್ಲಿ ಕಂತೆ ಕಂತೆ ಖೋಟಾ ನೋಟು ತೋರಿಸುವ ದಂಧೆಕೋರರು, 1 ಲಕ್ಷಕ್ಕೆ 5 ಲಕ್ಷ ನಕಲಿ ಹಣ ನೀಡುವ ಡೀಲ್ ಮುಂದಿಟ್ಟರು. ಬ್ಯಾಂಕ್, ಎಟಿಎಂನಲ್ಲೂ ಕೂಡ ಇದು ನಕಲಿ ನೋಟು ಅಂತಾ ಗೊತ್ತಾಗುವುದಿಲ್ಲ. ಪೊಲೀಸರಿಂದಲೂ ಸಮಸ್ಯೆಯಾಗಲ್ಲ ಅಂತಾ ಬಿಂದಾಸ್ ಆಗಿ ಹೇಳ್ತಾರೆ ಈ ಖದೀಮರು.
ಓವರ್ ಟೇಕ್ ಜಿದ್ದಿಗೆ ಬಿದ್ದು ಡ್ರೈವಿಂಗ್, ಮುಂದೇನಾಯ್ತು?
ಅಸಲಿ ನೋಟಿನ ತಲೆ ಮೇಲೆ ಹೊಡೆದಂತೆ ಈ ಖದೀಮರು ನಕಲಿ ನೋಟು ತಯಾರಿಸಿದ್ದಾರೆ. ಸುಲಭಕ್ಕೆ ಇದು ನಕಲಿ ನೋಟು ಅಂತಾ ಜನಸಾಮಾನ್ಯರಿಗೆ ಗೊತ್ತಾಗುವುದೇ ಇಲ್ಲ. ಹಾಗಾದ್ರೆ ಖೋಟಾ ನೋಟುಗಳನ್ನ ಹೇಗೆ ಪತ್ತೆ ಹಚ್ಚೋದು ಅಂತಾ ನಮ್ಮ ಪ್ರತಿನಿಧಿ ಷಡಕ್ಷರಿ ಪ್ರಾತ್ಯಕ್ಷಿಕೆ ನೀಡಿದ್ದಾರೆ
ಆತಂಕಕಾರಿ ವಿಷಯವೆಂದ್ರೆ ನೆರೆ ರಾಜ್ಯ ಮಹಾರಾಷ್ಟ್ರದಿಂದ ರಾಜ್ಯಕ್ಕೂ ನಕಲಿ ನೋಟಿನ ಜಾಲ ವಿಸ್ತರಿಸಿಕೊಂಡಿದೆ. ವಿಜಯಪುರದ ಗಾಂಧಿಚೌಕ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ನಕಲಿ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ. ಹಾಲಿನ ಅಂಗಡಿಯಲ್ಲಿ ಖೋಟಾ ನೋಟು ನೀಡಿ ಹಾಲು ಖರೀದಿ ಮಾಡಿದ್ದ ಆಸಾಮಿ ಸಿಕ್ಕಿಬಿದ್ದಿದ್ದು, ಬಳಿಕ ಇಡೀ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ. ಬಂಧಿತರಿಂದ 1.22 ಲಕ್ಷ ಮೌಲ್ಯದ 245 ಖೋಟಾ ನೋಟು ವಶಪಡಿಸಿಕೊಳ್ಳಲಾಗಿದೆ.