Asianet Suvarna News Asianet Suvarna News

ರಾಗಿಣಿಯಲ್ಲ, ಡ್ರಗ್ಗಿಣಿ! ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದು ಹೇಗೆ?

Sep 6, 2020, 11:28 AM IST

ಬೆಂಗಳೂರು (ಸೆ. 06): ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಡ್ರಗ್ಸ್‌ ದಂಧೆಯಲ್ಲಿ ಒಟ್ಟು 12 ಮಂದಿ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದರಲ್ಲಿ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಆರೋಪಿ ನಂ 2 ಆಗಿದ್ಧಾರೆ. ಸಿಸಿಬಿ ಅಧಿಕಾರಿಗಳು ರಾಗಿಣಿ ಮನೆ ಮೇಲೆ ದಾಳಿ ಮಾಡಿದಾಗ ಸಿಕ್ಕಿದ್ದು ಸಿಗಾರ್ ಪ್ಯಾಕ್. ಸಿಗರೇಟ್‌ನಲ್ಲಿ ಡ್ರಗ್ಸ್‌ ಸೇವನೆ ಮಾಡುತ್ತಿದ್ದರು ಎನ್ನಲಾಗಿದ್ದು, ಅಧಿಕೃತವಾಗಿ ತಿಳಿಯಲು FSL ಲ್ಯಾಬ್‌ಗೆ ಕಳುಹಿಸಲಾಗಿದೆ. 

ಡ್ರಗ್ ಸುಳಿಯಲ್ಲಿ ರಾಗಿಣಿ ಸಿಲುಕಿಕೊಂಡಾಗ ಸಿಸಿಬಿ ಬಲೆಯಂದ ತಪ್ಪಿಸಿಕೊಳ್ಳಲು ಏನೆನೆಲ್ಲಾ ಸರ್ಕಸ್ ಮಾಡಿದರು. ಮೊಬೈಲ್ ಬದಲಾಯಿಸಿದರು. ವಾಟ್ಸಾಪ್ ಡಿಲೀಟ್ ಮಾಡಿದರು. ಆದರೆ ಆಪ್ತ ರವಿಶಂಕರ್, ಡ್ರಗ್‌ ಸೇವಿಸುತ್ತಿದ್ದುದು ಹೌದು ಎಂದು ಸತ್ಯ ಬಾಯ್ಬಿಟ್ಟಾಗ ರಾಗಿಣಿಗೆ ಸಿಸಿಬಿ ಉರುಳು ಇನ್ನಷ್ಟು ಬಿಗಿಯಾಯಿತು. ಕೊನೆಗೆ ರಾಗಿಣಿಯೂ ಕೂಡಾ ಡ್ರಗ್‌ ಸೇವಿಸುತ್ತಿದ್ದುದು ಹೌದು ಎಂದು ಒಪ್ಪಿಕೊಂಡರು. ಸಿಸಿಬಿ 21 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಅಲ್ಲಿ ಏನೆಲ್ಲಾ ಪ್ರಶ್ನೆಗಳನ್ನು ಕೇಳಲಾಯಿತು? ಯಾವ ಯಾವ ರೀತಿ ವಿಚಾರಣೆಗೆ ಒಳಪಡಿಸಲಾಯಿತು? ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ...!