
ಭೀಮಾತೀರದಲ್ಲಿ ಹೊಸ ಗ್ಯಾಂಗ್: ಕಾರಿನಲ್ಲಿ ಓಡಾಡುವವರು, ಬ್ಯಾಂಕ್ ಗ್ರಾಹಕರೇ ಹುಷಾರ್..!
ಬ್ಯಾಂಕ್‌ನಿಂದ ಹಣ ಡ್ರಾ ಮಾಡುವವರಿಗಾಗಿಯೇ ಹೊಂಚು ಹಾಕುವ ಖದೀಮರು
ವಿಜಯಪುರ(ಆ.18): ನೆತ್ತರ ಹೊಳೆ ಹರಿದಿದ್ದ ಭೀಮಾತೀರಕ್ಕೆ ಈಗ ಹೊಸ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ದ್ವೇಷ, ರಕ್ತದ ದಾಹ ಖತರ್ನಾಕ್‌ಗಳ ಗುರಿ ಅಲ್ಲವೇ ಅಲ್ಲ. ಹೌದು, ಕಾರಿನಲ್ಲಿ ಓಡಾಡೋರು, ಬ್ಯಾಂಕಿಗೆ ಹೋಗುವರರೇ ಇವರ ಟಾರ್ಗೆಟ್. ನಟ್ಟ ನಡುರೋಡಲ್ಲಿ ಎಲ್ಲರೆದುರೇ ಹಣ ಎಗರಿಸುತ್ತಾರೆ ಈ ಪುಂಡರು. ಬ್ಯಾಂಕ್‌ನಿಂದ ಹಣ ಡ್ರಾ ಮಾಡುವವರಿಗಾಗಿಯೇ ಈ ಖದೀಮರು ಹೊಂಚು ಹಾಕುತ್ತಾರೆ. ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಹೋಗುವವರನ್ನೇ ಫಾಲೋ ಮಾಡಿ, ಕಾರಿನ ಆಯಿಲ್ ಸೋರುತ್ತಿದೆ ಅಂತ ಹೇಳುತ್ತಾರೆ. ಮಾಲೀಕ ಆಯಿಲ್ ಚೆಕ್ ಮಾಡೋಕೆ ಕಾರಿನಿಂದ ಕೆಳಗೆ ಇಳಿದರೆ ಸಾಕು ಕಾರಿನಲ್ಲಿದ್ದ ಹಣ ಕಿತ್ತು ಪರಾರಿಯಾಗುತ್ತಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕ್ಲಬ್‌ಹೌಸ್‌ನಲ್ಲಿ ಪಾಕ್ ಪ್ರೇಮ: ಪ್ರಕರಣ ದಾಖಲಿಸಿ ಕಿಡಿಗೇಡಿಗಳ ಬೇಟೆಗೆ ಮುಂದಾದ ಪೊಲೀಸರು