
ಮ್ಯಾನೇಜರೇ ಕಳ್ಳರಿಗೆ ಕೀ ಕೊಟ್ಟಿದ್ನಾ? ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬ್ಯಾಂಕ್ ರಾಬರಿಯ ರೋಚಕ ಇನ್ವೆಸ್ಟಿಗೇಷನ್..!
ರಾಜ್ಯದ ದೊಡ್ಡ ಬ್ಯಾಂಕ್ ದರೋಡೆಗಳಲ್ಲಿ ಒಂದಾದ ಈ ಪ್ರಕರಣದಲ್ಲಿ, ಪೊಲೀಸರಿಗೆ ಆರಂಭದಿಂದಲೂ ಒಳಗಿನವರ ಕೈವಾಡ ಇರುವುದು ಸ್ಪಷ್ಟವಾಗಿತ್ತು. 15 ದಿನಗಳ ಹಿಂದೆ ವರ್ಗಾವಣೆಯಾದ ಬ್ಯಾಂಕ್ ಮ್ಯಾನೇಜರ್ ಮೇಲೆ ಅನುಮಾನ ಬಂದಾಗ, ತನಿಖೆಯು ರೋಚಕ ತಿರುವು ಪಡೆಯಿತು.
ಅದು ನ್ಯಾಷನಲೈಸ್ಡ್ ಬ್ಯಾಂಕ್... ಆ ಬ್ಯಾಂಕ್ನಲ್ಲಿ ಸುತ್ತಮುತ್ತ ಗ್ರಾಮದ ರೈತರು.. ಸಾರ್ವಜನಿಕರು ಹಣವನ್ನ ಇಟ್ಟಿದ್ರು.. ಒಡವೆಗಳನ್ನ ಇಟ್ಟಿದ್ರು... ಬ್ಯಾಂಕ್ನಲ್ಲಿದ್ರೆ ಸೇಫ್ ಆಂತ ಅವರೆಲ್ಲಾ ಅಂದುಕೊಂಡಿದ್ರು.. ಆದ್ರೆ ಆವತ್ತೊಂದು ದಿನ ಅದೇ ಬ್ಯಾಂಕ್ ರಾಬರಿಯಾಗಿಬಿಟ್ಟಿತ್ತು.. ಮುಸ್ಸಂಜೆ ಹೊತ್ತಲ್ಲಿ ನುಗ್ಗಿದ ಕಳ್ಳರು ಇಡೀ ಬ್ಯಾಂಕ್ನೇ ಖಾಲಿ ಮಾಡಿದ್ರು.. ತನಿಖೆಗೆ ಮುಂದಾದ ಪೊಲೀಸರಿಗೆ ಒಂದೇ ಒಂದು ಕ್ಲೂ ಸಿಕ್ಕಿರಲಿಲ್ಲ.. ಸಿಸಿ ಕ್ಯಾಮರದ DVR ಕಳ್ಳರು ಕದ್ದೊಯ್ದಿದ್ರು.. ಮಾಠ ಮಂತ್ರ ಕೂಡ ಮಾಡಿಸಿದ್ರು.. ಮೊದಲಿಗೆ ಇದೆಲ್ಲವನ್ನ ನೋಡಿ ಇದು ಬಿಹಾರಿ ಗ್ಯಾಂಗ್ದೇ ಕೆಲಸ ಅಂತ ಅಂದುಕೊಂಡಿದ್ರು.. ಅದೇ ಆ್ಯಂಗಲ್ನಲ್ಲಿ ತನಿಖೆ ನಡೆಸಿದ್ರು.. ಆದ್ರೆ ಇದೆಲ್ಲಾ ಆಗಿ ಒಂದು ತಿಂಗಳಾಗಿದೆ.. ಇವತ್ತು ಪೊಲೀಸರು ಆ ಕಳ್ಳರ ಗ್ಯಾಂಗ್ ಅನ್ನ ಹೆಡೆಮುರಿ ಕಟ್ಟಿದ್ದಾರೆ.. ಹಾಗಾದ್ರೆ ಆವತ್ತು ಬ್ಯಾಂಕ್ ರಾಬರಿ ಮಾಡಿದ್ದು ಬಿಹಾರಿ ಗ್ಯಾಂಗೇನಾ..? ಪೊಲೀಸರು ನಡೆಸಿದ ಆ ರೋಚಕ ಇನ್ವೆಸ್ಟಿಗೇಷನ್ ಹೇಗಿತ್ತು..? ಒಂದು ಬ್ಯಾಂಕ್ ರಾಬರಿಯ ಕಂಪ್ಲೀಟ್ ಡಿಟೇಲ್ಸ್ ಇವತ್ತಿನ ಎಫ್.ಐ.ಆರ್