
ದೆಹಲಿಯಲ್ಲಿ ಅರೆಸ್ಟ್, ತೆಲಂಗಾಣದಲ್ಲಿ ಎಸ್ಕೇಪ್: ಆಂಟಿ ಲವ್ವರ್‌ನ ಎಸ್ಕೆಪ್ ಪ್ಲಾನ್‌ಗೆ ಬೆಚ್ಚಿ ಬಿದ್ದ ಪೊಲೀಸರು!
ಕೊಲೆ ಆರೋಪಿಯನ್ನು ಮತ್ತೆ ಕರೆದುಕೊಂಡು ತೆಲಂಗಾಣಕ್ಕೆ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ರು. ಆದ್ರೆ ಆ ಕಿಲಾಡಿ ಹಂತಕ ಪೊಲೀಸರಿಗೂ ಛಳ್ಳೆಹಣ್ಣು ತಿನ್ನಿಸಿದ್ದಾನೆ.
ಆತ ದೂರದ ಹರಿಯಾಣದವನು. ತನ್ನ ತಾಯಿ ಜೈಲಿನಲ್ಲಿರುವಾಗ ತಾಯಿಯ ಜೈಲ್ ಮೇಟ್ನ ಪರಿಚಯ ಮಾಡಿಕೊಂಡು ಆಕೆಗಾಗಿ ತಲೆಂಗಾಣದಲ್ಲಿ ಒಂದು ಮರ್ಡರ್ ಮಾಡಿ ಆ ಮೃತದೇಹವನ್ನ ಉಡುಪಿಯಲ್ಲಿ ತಂದು ಎಸೆದಿದ್ದ. ಅದೇ ಕೇಸ್ನ ತನಿಖೆ ನಡೆಸಿದ್ದ ನಮ್ಮ ಕರ್ನಾಟಕ ಪೊಲೀಸರು ಹಂತಕರ ಹೆಡೆಮುರಿ ಕಟ್ಟಿದ್ರು. ಇನ್ನೂ ಕೊಲೆ ಮಾಡಿ ದೆಹಲಿಗೆ ಎಸ್ಕೆಪ್ ಆಗಿದ್ದ ಹರಿಯಾಣ ಮೂಲದವನನ್ನ ಇತ್ತಿಚೆಗಷ್ಟೇ ಅರೆಸ್ಟ್ ಮಾಡಿದ್ರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆದ್ರೆ ಅವನನ್ನು ಮತ್ತೆ ಕರೆದುಕೊಂಡು ತೆಲಂಗಾಣಕ್ಕೆ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ರು. ಆದ್ರೆ ಆ ಕಿಲಾಡಿ ಹಂತಕ ಪೊಲೀಸರಿಗೂ ಛಳ್ಳೆಹಣ್ಣು ತಿನ್ನಿಸಿದ್ದಾನೆ. ಎಲ್ಲರೂ ಮಲಗಿರುವಾಗ್ಲೇ ಆತ ಎದ್ದು ಎಸ್ಕೇಪ್ ಆಗಿದ್ದಾನೆ. ಒಬ್ಬ ಹಂತಕನ ಗ್ರೇಟ್ ಎಸ್ಕೇಪ್ ಪ್ಲಾನೇ ಇವತ್ತಿನ ಎಫ್.ಐ.ಆರ್