ಬಯಲಾಯ್ತು ಭಯಾನಕ ಡ್ರಗ್ಸ್‌ ಮಾಫಿಯಾ; ವಿದ್ಯಾರ್ಥಿಗಳೇ ಇವರ ಟಾರ್ಗೆಟ್..!

ಹೊರ ರಾಜ್ಯಗಳಿಂದ ಕ್ವಿಂಟಾಲ್‌ ಗಟ್ಟಲೇ ಗಾಂಜಾ ತಂದು ರಾಜ್ಯದಲ್ಲಿ ವಿತರಿಸುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ, ಪ್ರಮುಖ ಪೂರೈಕೆದಾರರಾದ ಮೈಸೂರು ಮೂಲದ ರಾಜಕಾರಣಿ ಸೇರಿದಂತೆ ಮೂವರನ್ನು ಸೆರೆ ಹಿಡಿದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 29): ಹೊರ ರಾಜ್ಯಗಳಿಂದ ಕ್ವಿಂಟಾಲ್‌ ಗಟ್ಟಲೇ ಗಾಂಜಾ ತಂದು ರಾಜ್ಯದಲ್ಲಿ ವಿತರಿಸುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ, ಪ್ರಮುಖ ಪೂರೈಕೆದಾರರಾದ ಮೈಸೂರು ಮೂಲದ ರಾಜಕಾರಣಿ ಸೇರಿದಂತೆ ಮೂವರನ್ನು ಸೆರೆ ಹಿಡಿದಿದೆ.

ಮೈಸೂರಿನ ಕೆ.ಆರ್‌.ಪುರದ ಸಮೀರ್‌, ಕೈಸರ್‌ ಪಾಷ ಅಲಿಯಾಸ್‌ ಜಾಕೀರ್‌ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಇಸ್ಮಾಯಿಲ್‌ ಶರೀಫ್‌ ಬಂಧಿತರಾಗಿದ್ದು, ಆರೋಪಿಗಳಿಂದ .1 ಕೋಟಿ ಮೌಲ್ಯದ 204 ಕೆ.ಜಿ ಗಾಂಜಾ, ಮೂರು ಮೊಬೈಲ್‌ಗಳು ಹಾಗೂ ಲಾರಿ ಸೇರಿದಂತೆ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮತ್ತೊಂದು ಕಡೆ NCB ತಂಡ 2 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ಸುದ್ದಿ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಂದಿನ ಕವರ್ ಸ್ಟೋರಿಯಲ್ಲಿ..!

ಸೌಂದರ್ಯದ ರಹಸ್ಯ, ಡ್ರಗ್ಸ್‌ ದಾಸರಾದ ಸ್ಟಾರ್‌ಗಳಿಗೆ ನೋಟಿಸ್!

Related Video