ಕೋವಿಡ್‌ ಟೆಸ್ಟ್‌ಗೆ ಹೆಚ್ಚು ಹಣ ವಸೂಲಿ; ಕವರ್‌ ಸ್ಟೋರಿಯಲ್ಲಿ ಸೆರೆಯಾಯ್ತು ಖಾಸಗಿ ಆಸ್ಪತ್ರೆಗಳ ದಂಧೆ

ಕೋವಿಡ್‌ ಟೆಸ್ಟ್‌ಗೆ ಸರ್ಕಾರ ನಿರ್ದಿಷ್ಟ ಮೊತ್ತವನ್ನು ಫಿಕ್ಸ್ ಮಾಡಿದ್ದರೆ ಕೆಲ ಖಾಸಗಿ ಆಸ್ಪತ್ರೆಗಳು ಮನಸೋ ಇಚ್ಛೆ ದರ ವಸೂಲಿ ಮಾಡುತ್ತಿದೆ. ಜನ ಸಾಮಾನ್ಯರನ್ನು ಹಿಂಡಿ ಹಿಂಸಿಸುತ್ತಿದೆ. ನಿಗದಿತ ಮೊತ್ತಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರ ದೂರು ಹೆಚ್ಚಾಗುತ್ತಿದ್ದಂತೆ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ರಿಯಾಲಿಟಿ ಚೆಕ್‌ಗೆ ಮುಂದಾಯಿತು. 

First Published Oct 3, 2020, 6:24 PM IST | Last Updated Oct 3, 2020, 6:24 PM IST

ಬೆಂಗಳೂರು (ಅ. 03): ಕೋವಿಡ್‌ ಟೆಸ್ಟ್‌ಗೆ ಸರ್ಕಾರ ನಿರ್ದಿಷ್ಟ ಮೊತ್ತವನ್ನು ಫಿಕ್ಸ್ ಮಾಡಿದ್ದರೆ ಕೆಲ ಖಾಸಗಿ ಆಸ್ಪತ್ರೆಗಳು ಮನಸೋ ಇಚ್ಛೆ ದರ ವಸೂಲಿ ಮಾಡುತ್ತಿದೆ. ಜನ ಸಾಮಾನ್ಯರನ್ನು ಹಿಂಡಿ ಹಿಂಸಿಸುತ್ತಿದೆ. ನಿಗದಿತ ಮೊತ್ತಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರ ದೂರು ಹೆಚ್ಚಾಗುತ್ತಿದ್ದಂತೆ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬೆಂಗಳೂರಿನ ಮಲ್ಲತ್ತಹಳ್ಳಿ, ಕೆಂಗೇರಿ ಉಪನಗರ, ಕುಮಾರಸ್ವಾಮಿ ಲೇಔಟ್, ಚಿಕ್ಕಬಾಣಾವರದಲ್ಲಿರುವ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ರಿಯಾಲಿಟಿ ಚೆಕ್‌ಗೆ ಮುಂದಾಯಿತು. ಟೆಸ್ಟ್‌ಗೆ ಬಂದವರಿಂದ ಹೇಗೆಲ್ಲಾ ಹಣ ವಸೂಲಿ ಮಾಡಲಾಗುತ್ತದೆ ಎಂಬುದು ಸುವರ್ಣ ನ್ಯೂಸ್ ಸ್ಟಿಂಗ್ ಅಪರೇಶನ್‌ನಲ್ಲಿ ಸೆರೆಯಾಗಿದೆ. 

ಬೆಂಗಳೂರಿಗೆ ಡ್ರಗ್ಸ್ ಎಲ್ಲಿಂದ ಬರುತ್ತೆ? ಕವರ್‌ ಸ್ಟೋರಿಯಲ್ಲಿ ಬಯಲು