ಗಣೇಶ ಮೆರವಣಿಗೆಯಲ್ಲಿ ಅಣ್ಣತಮ್ಮಂದಿರ ಕಾಳಗ: ಹೆಣ ಬೀಳ್ತಿದ್ದಂತೆ ಮೆರವಣಿಗೆಯೇ ಸ್ಟಾಪ್‌

Suvarna FIR: ಗಣೇಶನ ಮೆರವಣಿಗೆಯಲ್ಲಿ ನಡೆದ ಅದೊಂದು ಕೊಲೆ ಮತ್ತು ಆ ಕೊಲೆಯ ಸುತ್ತಿನ ತನಿಖೆಯನ್ನ ತಿಳಿಸುವುದೇ ಇವತ್ತಿನ ಎಫ್.ಐ.ಆರ್

Share this Video
  • FB
  • Linkdin
  • Whatsapp

ಗದಗ (ಸೆ. 13): ಎಲ್ಲಾ ಏರಿಯಾಗಳಂತೆ ಅಲ್ಲಿ ಕೂಡ ಗಣೇಶೋತ್ಸವ (Ganeshotsava) ಅದ್ಧೂರಿಯಾಗಿ ನಡೆಯುತ್ತಿತ್ತು. ಅವತ್ತು ಗಣೇಶನ ವಿಸರ್ಜನೆಯ ಸಮಯ. ಆ ಏರಿಯಾದ ಜನ ಗಣೇಶ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ರು. ಡಿಜೆ, ಜೈಕಾರದೊಂದಿಗೆ ಗಣೇಶನ ಮೆರವಣಿಗೆ ಸಾಗ್ತಿತ್ತು. ಇದೇ ವೇಳೆ ಅಲ್ಲಿ ಒಂದು ಹೆಣ ಬಿದ್ದಿತ್ತು (Murder). ಒಬ್ಬ ಯುವಕನಿಗೆ ಚಾಕು ಹಾಕಿ ಕೊಲ್ಲಲಾಗಿತ್ತು. ಸದ್ಯ ಇರುವ ಪರಿಸ್ಥಿತಿಯಲ್ಲಿ ಗಣೇಶನ ಹಬ್ಬದಲ್ಲಿ ಕೊಲೆಯಾಗಿದೆ ಅಂದ್ರೆ ಏನರ್ಥ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಅಲ್ಲಿ ಕೂಡ ಆಗಿದ್ದು ಅದೇ. ಗಣೇಶನ ಮೆರವಣಿಗೆ ಟೈಂನಲ್ಲಿ ಆದ ಒಂದು ಕೊಲೆಯ ಸೂಕ್ಷ್ಮತೆಯನ್ನ ಅರಿತ ಪೊಲೀಸರು ಗಣೇಶನ ಮೆರವಣಿಗೆಯನ್ನೇ ಸ್ಟಾಪ್ ಮಾಡಿದ್ರು. 

ಎಲ್ಲರನ್ನ ಮನೆಗೆ ಕಳಿಸಿ ಕೊಲೆಯ ತನಿಖೆ ಆರಂಬಿಸಿದ್ರು. ಅಲ್ಲಿ ಕೊಂಚ ಯಾಮಾರಿದಿದ್ರೂ ಕೋಮು ಗಲಭೆ ಫಿಕ್ಸ್ ಆಗಿತ್ತು. ಆದ್ರೆ ಪೊಲೀಸರು ಅಲರ್ಟ್ ಆಗಿದ್ರಿಂದ ಎಲ್ಲವೂ ಶಾಂತವಾಯ್ತು. ಅದ್ರೆ ಅಂದು ನಡೆದ ಕೊಲೆ ಮತ್ತು ಅದರ ಹಿಂದಿನ ಕಹಾನಿಯನ್ನ ಹುಡುಕಿ ಹೊರಟ ಪೊಲೀಸರಿಗೆ ಶಾಕ್ ಕಾದಿತ್ತು. ಹೀಗೆ ಗಣೇಶನ ಮೆರವಣಿಗೆಯಲ್ಲಿ ನಡೆದ ಅದೊಂದು ಕೊಲೆ ಮತ್ತು ಆ ಕೊಲೆಯ ಸುತ್ತಿನ ತನಿಖೆಯನ್ನ ತಿಳಿಸುವುದೇ ಇವತ್ತಿನ ಎಫ್.ಐ.ಆರ್

ಇಬ್ಬಿಬ್ಬರ ಜತೆ ಏಕಕಾಲದಲ್ಲಿ ಆಕೆಯ ಲವ್ವಿಡವ್ವಿ! ಇದೊಂದು ಪಕ್ಕಾ ಕಿತ್ತೋದ್ ಲವ್ ಸ್ಟೋರಿ!

Related Video