ಗದಗ: ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಸಾವಿನಿಂದ ಬಚಾವ್‌ ಆದ ಮಗಳು

*  ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ
*  ತಾಯಿ ಕೈಯಿಂದ ತಪ್ಪಿಸಿಕೊಂಡು ಬದುಕುಳಿದ ಇಬ್ಬರು ಮಕ್ಕಳು 
*  ಸಾಯುವ ಬಗ್ಗೆ ಮೊದಲೇ ತೀರ್ಮಾನ ಮಾಡಿದ್ದ ತಾಯಿ 
 

Share this Video
  • FB
  • Linkdin
  • Whatsapp

ಗದಗ(ಸೆ.29): ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಘಟನೆಯಲ್ಲಿ ತಾಯಿ ಉಮಾದೇವಿ ಹಾಗೂ ಓರ್ವ ಮಗಳು ಸಾವನ್ನಪ್ಪಿದ್ದಳು. ಆದರೆ, ತಾಯಿ ಕೈಯಿಂದ ತಪ್ಪಿಸಿಕೊಂಡು ಬದುಕುಳಿದ ಇಬ್ಬರು ಮಕ್ಕಳಲ್ಲಿ ಓರ್ವ ಬಾಲಕಿ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಸಾಯುವ ಬಗ್ಗೆ ತಾಯಿ ಮೊದಲೇ ತೀರ್ಮಾನ ಮಾಡಿದ್ದಳು. ಊರಿಗೆ ಹೋಗೋಣ ಎಂದು ಮಕ್ಕಳನ್ನ ತಾಯಿ ಕರೆತಂದಿದ್ದಳು. ರಸ್ತೆ ಮೇಲಿಂದ ನದಿಗೆ ತಾಯಿ ಹಾರಿದ್ದಳು. ಈ ವೇಳೆ ಸಾವಿನಿಂದ ಬಚಾವ್‌ ಆಗಿ ಬಂದ 10 ವರ್ಷದ ಮಗಳು ಘಟನೆ ಬಗ್ಗೆ ವಿವರವಾಗಿ ತಿಳಿಸಿದ್ದಾಳೆ. 

ಗದಗ: ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಯತ್ನ, ಇಬ್ಬರ ಸಾವು

Related Video