ಬಸವಕಲ್ಯಾಣ: ಕೊಟ್ಟ ಹಣ ವಾಪಾಸು ಕೇಳಿದ್ದಕ್ಕೆ ಗೆಳೆಯನಿಂದಲೇ ಚಾಕು ಇರಿತ!
ಬಸವಕಲ್ಯಾಣದ ಅಶೋಕ್ ಪಾಟೀಲ್ ಎಂಬುವ ಮೇಲೆ ಚಾಕುವಿನಿಂದ ದಯಾನಂದ್ ಇರಿದಿದ್ದಾನೆ. 10 ಸಾವಿರ ರೂ. ಸಾಲ ವಾಪಾಸು ಕೇಳಿದ್ದಕ್ಕೆ ಹಾಡಹಗಲೇ ಬಾರ್‌ಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ದುರುಳ.
ಬಸವಕಲ್ಯಾಣ(ಜ.09): ಕೊಟ್ಟ ಹಣ ವಾಪಾಸು ಕೇಳಿದ್ದಕ್ಕೆ ಗೆಳೆಯನೇ ಚಾಕು ಇರಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ನಿನ್ನೆ(ಬುಧವಾರ) ನಡೆದಿದೆ. ಹಾಡಹಗಲೇ ಘಟನೆ ನಡೆದಿದ್ದು ಜನರು ಬೆಚ್ಚಿಬಿದ್ದಿದ್ದಾರೆ. ನಗರದ ಬಾರ್‌ನೊಳಗೆ ನುಗ್ಗಿದ ದಯಾನಂದ್ ಎಂಬುವನು ಅಶೋಕ್‌ಗೆ ಚಾಕುವಿನಿಂದ ಇರಿದಿದ್ದಾನೆ. ಬಸವಕಲ್ಯಾಣದ ಅಶೋಕ್ ಪಾಟೀಲ್ ಎಂಬುವ ಮೇಲೆ ಚಾಕುವಿನಿಂದ ದಯಾನಂದ್ ಇರಿದಿದ್ದಾನೆ. 10 ಸಾವಿರ ರೂ. ಸಾಲ ವಾಪಾಸು ಕೇಳಿದ್ದಕ್ಕೆ ಹಾಡಹಗಲೇ ಬಾರ್‌ಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ದುರುಳ.
ರಾಯಚೂರು: ಜಮೀನು ಖರೀದಿಗೆ ಬಂದವನ ಮೇಲೆ ಗೂಂಡಾಗಿರಿ, ಕಲ್ಲು, ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ