Asianet Suvarna News Asianet Suvarna News

ಮಾಯಾಂಗನೆ ಮೋಹಕ್ಕೆ ಸಿಲುಕಿ ಮಿಲಿಟರಿ ಮಾಹಿತಿ ಸೋರಿಕೆ ಮಾಡಿದ್ದ!

* ದೇಶದ ಮಿಲಿಟರಿ  ಮಾಹಿತಿ  ವೈರಿಗಳಿಗೆ ಕಳಿಸುತ್ತಿದ್ದ ಕಿರಾತಕ
* ದೇಶದ ಪ್ರಮುಖ ಸ್ಥಳ, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೋ ತೆಗೆದು ಕಳಿಸುತ್ತಿದ್ದ
* ಬೆಂಗಳೂರಿನಲ್ಲಿ ರಾಜಸ್ಥಾನ ಮೂಲದ ವ್ಯಕ್ತಿ ಬಂಧನ

Sep 20, 2021, 3:57 PM IST

ಬೆಂಗಳೂರು (ಸೆ.20):  ದೇಶದ ಮಿಲಿಟರಿ ಮಾಹಿತಿಯನ್ನು ವೈರಿಗಳಿಗೆ ಲೀಕ್ ಮಾಡುತ್ತಿದ್ದ  ರಾಜಸ್ಥಾನ ಮೂಲದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.  ಕಿರಾತಕ ಜೀತೇಂದ್ರ ರಾಥೋಡ್ ಸೇನಾ ಯುನಿಫಾರ್ಮ್ ಸಹ ಇಟ್ಟುಕೊಂಡಿದ್ದ. ಈತ  ರಾಜಸ್ಥಾನದ ಬಾರ್ಮರ್ ಹಳ್ಳಿಯವನಾಗಿದ್ದು, ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.  

ಉಗ್ರರ ಜತೆ ಸಂಪರ್ಕ ಹೊಂದಿದ್ದ ಬೆಂಗಳೂರಿನ ಬಟ್ಟೆ ವ್ಯಾಪಾರಿ

ಪಾಕಿಸ್ತಾನದ ಐಎಸ್ಐ ಅಧಿಕಾರಿಗಳ ಜೊತೆ ನೇರ ಸಂಪರ್ಕ ಹೊಂದಿದ್ದು,  ವಾಟ್ಸಪ್ ಸಂದೇಶ, ಕಾಲ್ ಮೂಲಕ ಸೇನೆಯ ಸ್ಥಳ ಹಾಗೂ ಮಾಹಿತಿ ಕಳುಹಿಸಿದ್ದ.   ಕಣ್ಣಿಗೆ ಕಾಣದ ಯುವತಿಯ ಮಾತಿಗೆ ಮರುಳಾಗಿ ಮಾಹಿತಿ ಕಳಿಸುತ್ತಿದ್ದ ಎಂಬ ಅಂಶವೂ ಬಹಿರಂಗವಾಗಿದೆ. ವೈರಿಗಳು ಯುವತಿ  ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ಸೃಷ್ಟಿ ಮಾಡಿಕೊಂಡು ಈತನನ್ನು ಸಂಪರ್ಕ ಮಾಡಿದ್ದರು.